ಕೊಲಂಬೊ: ಏಷ್ಯಾ ಕಪ್ 2023 (Asia Cup 2023) ಸೂಪರ್ ಫೋರ್ ಪಂದ್ಯದಲ್ಲಿ ಇಂದು ಸೆಣಸಲಿರುವ ಭಾರತ (India) ಮತ್ತು ಪಾಕಿಸ್ತಾನ (Pakistan) ತಂಡಗಳಿಗೆ ಮಳೆಯ ಆತಂಕ ಸ್ವಲ್ಪ ಕಡಿಮೆಯಾಗಿದೆ. ಹವಾಮಾನ ಸುಧಾರಣೆಯಾಗಿದ್ದು, ಸ್ಥಳೀಯ ಕಾಲಮಾನ ಸಂಜೆ ಸುಮಾರು 7 ಗಂಟೆಯ ವರೆಗೂ ಮಳೆಯಾಗುವ ಮುನ್ಸೂಚನೆ ಇಲ್ಲ ಎಂದು ವರದಿಯಾಗಿದೆ.
90% ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದರಿಂದ ಪಾಕ್ ಹಾಗೂ ಭಾರತ ಪಂದ್ಯಕ್ಕೆ ರಿಸರ್ವ್ ದಿನವನ್ನು ಘೋಷಿಸಲಾಗಿತ್ತು. ಅಲ್ಲದೇ ಶನಿವಾರದ ವರದಿಯಲ್ಲಿ ರಿಸರ್ವ್ ದಿನದಂದು 75% ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಬಗ್ಗೆ ಉಲ್ಲೇಖಿಸಲಾಗಿತ್ತು. ಇದು ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಈಗ ಮಳೆಯಾಗುವ ಸಾಧ್ಯತೆ ವಿರಳವಾಗಿದೆ ಎಂಬ ವಿಚಾರ ಕ್ರಿಕೆಟ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೊಲಂಬೋದಲ್ಲಿ ಭಾರತ-ಪಾಕ್ ಹಣಾಹಣಿ; ಇಂದಿನ ಮ್ಯಾಚ್‌ಗೆ ವರುಣನ ಅವಕೃಪೆ ಭೀತಿ
ಶ್ರೀಲಂಕಾದ ಪೆಲ್ಲೆಕೆಲೆಯಲ್ಲಿ ನಡೆದಿದ್ದ ಭಾರತ ಹಾಗೂ ಪಾಕ್‌ನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದರಿಂದ ಇತ್ತಂಡಗಳು ಒಂದೊಂದು ಅಂಕ ಹಂಚಿಕೊಂಡಿದ್ದವು. ಆದರೆ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 238 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಪಾಕಿಸ್ತಾನ ತಂಡ 3 ಅಂಕಗಳೊಂದಿಗೆ ಸೂಪರ್ ಫೋರ್ ಹಂತಕ್ಕೆ ಜಿಗಿದಿತ್ತು. ಟೀಂ ಇಂಡಿಯಾ 1 ಅಂಕದೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದನ್ನೂ ಓದಿ: ಟೀಂ ಇಂಡಿಯಾ ಎದುರಿಸಲು ನಮ್ಮ ಬಳಿ ಬಲಿಷ್ಠ ಬೌಲಿಂಗ್-ಬ್ಯಾಟಿಂಗ್ ಪಡೆ ಇದೆ: ಬಾಬರ್ ಆಜಂ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]