ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ (Premadasa International Cricket Stadium) ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮತ್ತೆ ಮಳೆ (Rain) ಕಾಟ ಶುರುವಾಗಿದೆ. ಇದರಿಂದ ಓವರ್ ಕಡಿತಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು ಪಾಕಿಸ್ತಾನ ತಂಡದ ಹಾದಿ ಮತ್ತಷ್ಟು ಕಠಿಣವಾಗುವ ಸಾಧ್ಯತೆ ಎದುರಾಗಿದೆ.
357 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದು ಚೇಸಿಂಗ್ ಆರಂಭಿಸಿದ ಪಾಕಿಸ್ತಾನ (Pakistan) 11 ಓವರ್‌ಗಳಲ್ಲಿ 44 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಮಳೆ ಅಡ್ಡಿಯಾಗಿದ್ದರಿಂದ ಓವರ್ ಕಡಿತಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Asia Cup 2023ː ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿಂಗ್ ಕೊಹ್ಲಿ ಮತ್ತೊಂದು ಮೈಲುಗಲ್ಲು
Advertisement
Advertisement
ಪಾಕ್ ತಂಡಕ್ಕೆ 20 ಓವರ್‌ಗಳ ಅವಕಾಶ ನೀಡಿದ್ರೆ 200 ರನ್ ಗುರಿ ನೀಡುವ ಸಾಧ್ಯತೆಗಳಿವೆ. ಒಂದು ವೇಳೆ 25 ಓವರ್‌ಗಳ ಆಟಕ್ಕೆ ಅವಕಾಶ ನೀಡಿದ್ರೆ 237 ರನ್ ಹಾಗೂ 30 ಓವರ್‌ಗಳ ಆಟಕ್ಕೆ ಅವಕಾಶ ನೀಡಿದ್ರೆ 267 ರನ್‌ಗಳ ಗುರಿ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇದೀಗ ಮಳೆ ಕೊಂಚ ಬಿಡುವು ನೀಡಿದ್ದು, ಮೈದಾನ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಇದನ್ನೂ ಓದಿ: Asia Cup 2023ː ಕಿಂಗ್ ಕೊಹ್ಲಿ, ರಾಹುಲ್ ಆರ್ಭಟಕ್ಕೆ ಪಾಕ್ ಪಂಚರ್ – 357 ರನ್ ಗುರಿ ನೀಡಿದ ಭಾರತ
Advertisement
Advertisement
ಆರಂಭಿಕರಾಗಿ ಕಣಕ್ಕಿಳಿದ ಇಮಾಮ್ ಉಲ್ ಹಕ್ 18 ಎಸೆತಗಳಲ್ಲಿ 9 ರನ್‌ಗಳಿಸಿದ್ರೆ, ವಿಶ್ವದ ನಂ.1 ಬ್ಯಾಟರ್ ಹಾಗೂ ಪಾಕ್ ತಂಡದ ನಾಯಕ ಬಾಬರ್ ಆಜಂ (Babar Azam) 24 ಎಸೆತಗಳಲ್ಲಿ 10 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ. ಮತ್ತೋರ್ವ ಆರಂಭಿಕ ಫಖರ್ ಜಮಾನ್ 14 ರನ್ ಹಾಗೂ ಮೊಹಮ್ಮದ್ ರಿಜ್ವಾನ್ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಮಳೆ ಕಾಟದ ಹೊರತಾಗಿಯೂ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾ ಎದುರಾಳಿ ಪಾಕಿಸ್ತಾನ ತಂಡಕ್ಕೆ 357 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
Web Stories