ಏಷ್ಯಾಕಪ್‍ನಲ್ಲಿಂದು ಟೀಂ ಇಂಡಿಯಾ, ಪಾಕ್ ಹಣಾಹಣಿ- ಹೈವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳ ಕಾತರ

Public TV
2 Min Read
INDIA PAKISTAN MATCH 1

ಕ್ಯಾಂಡಿ: ಯಾವುದೇ ಕ್ರಿಕೆಟ್ ಪಂದ್ಯವಿರಲಿ, ಯಾವುದೇ ದೇಶವಿರಲಿ. ಅಲ್ಲಿ ಭಾರತಾಂಬೆ ವಿಜಯಮಾಲೆ ತೊಡಬೇಕು. ಗೆಲುವಿನ ಖುಷಿಯಿಂದ ಅಭಿಮಾನಿಗಳು ನಲಿದಾಡಬೇಕು. ಯಾಕಂದ್ರೆ ಕ್ರಿಕೆಟ್ ಅಂದ್ರೆ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ (Cricket) ಅಭಿಮಾನಿಗಳ ಹೃದಯಬಡಿತ. ಅದರಲ್ಲೂ ಭಾರತ, ಪಾಕಿಸ್ತಾನ (Ind vs Pak) ಪಂದ್ಯ ಅಂದ್ರೆ ಸಾಕು, ಉಭಯ ದೇಶಗಳ ಅಭಿಮಾನಿಗಳಿಗೆ ಅದು ಕೇವಲ ಪಂದ್ಯವಲ್ಲ. ಅದೊಂದು ರಣರಂಗ. ಅಂಥದ್ದೇ ರಣರಂಗಕ್ಕೆ ಅಖಾಡ ಸಜ್ಜಾಗಿದೆ.

INDIA PAKISTAN MATCH 2

ಹೌದು. ಏಷ್ಯಾಕಪ್ ಕ್ರಿಕೆಟ್ (Asia Cup 2023) ಟೂರ್ನಿಯಲ್ಲಿಂದು ಬದ್ಧವೈರಿಗಳ ಕಾದಾಟ ನಡೆಯಲಿದೆ. ಶ್ರೀಲಂಕಾದ (Sri Lanka) ಪಲೇಕೆಲೆಯಲಿ ಭಾರತ-ಪಾಕಿಸ್ತಾನ ತಂಡಗಳು ಅಖಾಡಕ್ಕಿಳಿಯಲಿವೆ. ಈಗಾಗಲೇ ಟೂರ್ನಿಯಲ್ಲಿ ನೇಪಾಳ ವಿರುದ್ಧ ಗೆದ್ದಿರುವ ಪಾಕ್, ಇಂದು ಭಾರತಕ್ಕೆ ಸವಾಲೊಡ್ಡಲಿದೆ. ಮತ್ತೊಂದೆಡೆ ಟೀಂ ಇಂಡಿಯಾಗೆ ಇದು ಮೊದಲ ಪಂದ್ಯವಾಗಿದ್ದು, ಶುಭಾರಂಭಕ್ಕೆ ಕಠಿಣ ತಾಲೀಮು ನಡೆಸಿದೆ. ಇದನ್ನೂ ಓದಿ: AsiaCup 2023: ಟೀಂ ಇಂಡಿಯಾ ವಿರುದ್ಧ ಹೊಸ ದಾಖಲೆ ಬರೆಯಲು ಕಾಯ್ತಿದ್ದಾರೆ ಬಾಬರ್ ಆಜಂ

INDIA PAKISTAN MATCH

ಯುವ, ಅನುಭವಿ ಆಟಗಾರರೊಂದಿಗೆ ಟೀಂ ಇಂಡಿಯಾ ಕಣಕ್ಕೆ: ಸ್ಟಾರ್ ಪ್ಲೇಯರ್ಸ್ ತಂಡಕ್ಕೆ ಮರಳಿದ್ರೂ, ಕಣಕ್ಕಿಳಿಯೋದು ಡೌಟು. ಯಾಕಂದರೆ ಅನಾರೋಗ್ಯದಿಂದ ಬಳಲುತ್ತಿರುವ ಕೆಎಲ್ ರಾಹುಲ್ (K L Rahul), ಪಾಕಿಸ್ತಾನ ಹಾಗೂ ನೇಪಾಳ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯುತ್ತಿಲ್ಲ. ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಇದು ತಂಡಕ್ಕೆ ನಿರಾಸೆ ಮೂಡಿಸಿದೆ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಯುವ ಆಟಗಾರ ಇಶನ್ ಕಿಶನ್ ಕಣಕ್ಕಿಳಿತೋದು ಪಕ್ಕಾ. ಇನ್ನು ಹಿಟ್‍ಮ್ಯಾನ್ ರೋಹಿತ್, ಗಿಲ್, ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮೇಲೆ ಬ್ಯಾಟಿಂಗ್ ಜವಬ್ದಾರಿ ಇದೆ. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಆಲ್‍ರೌಂಡರ್ ಗಳಾಗಿ ಜಾದು ಮಾಡಲಿದ್ದಾರೆ. ವೇಗಿ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರೋದು ಬೌಲಿಂಗ್ ಬಲವನ್ನ ಹೆಚ್ಚಿಸಿದೆ. ಶಮಿ, ಸಿರಾಜ್, ಕುಲ್ದೀಪ್ ಯಾದವ್, ಕನ್ನಡಿಗ ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್ ಬೌಲಿಂಗ್ ಟ್ರಂಪ್‍ಕಾರ್ಡ್.

ಉತ್ತಮ ಲಯದಲ್ಲಿರುವ ಬಾಬರ್, ರಿಜ್ವಾನ್: ಪಾಕ್ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಬಾಬರ್ ಅಜಂ ಸಖತ್ ಫಾರ್ಮ್‍ನಲ್ಲಿದ್ರೆ, ರಿಜ್ವಾನ್, ಫಕರ್ ಜಮಾನ್, ಇಫ್ತಿಕರ್ ಅಹಮದ್‍ರಂತ ಬ್ಯಾಟ್ಸ್ ಮನ್‍ಗಳು ಪಾಕ್‍ನ ಬಲ. ಶಾಹಿನ್ ಶಾ ಅಫ್ರಿದಿ, ಹ್ಯಾರೀಸ್ ರೌಫ್, ನಸೀಮ್ ಶಾ ಬೌಲಿಂಗ್ ದಾಳಿಯ ನೊಗ ಹೊತ್ತಿದ್ದಾರೆ. ಇದನ್ನೂ ಓದಿ: ಕಿಂಗ್‌ ಕೊಹ್ಲಿ ಕಟ್ಟಿಹಾಕಲು ಬಾಬರ್‌ ಬಳಿ ಇದೆಯಾ ಮಾಸ್ಟರ್‌ ಪ್ಲ್ಯಾನ್‌? – ಇಬ್ಬರಲ್ಲಿ ಯಾರು ಬೆಸ್ಟ್‌?

ಭಾರತ-ಪಾಕ್ (Team India- Pakistan) ತಂಡಗಳು ಈವರೆಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ 16 ಭಾರೀ ಮುಖಾಮುಖಿಯಾಗಿದ್ದು, ಭಾರತ 9 ಬಾರಿ ಭಾರತ ವಿಜಯ ಪತಾಕೆ ಹಾರಿಸಿದೆ. ಪಾಕ್ ಪಡೆ 6 ಬಾರಿ ಜಯಸಿದೆ. ಕಳೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿನ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಟೀಂ ಇಂಡಿಯಾ ರಣತಂತ್ರ ರೂಪಿಸಿದೆ. ಒಟ್ಟಿನಲ್ಲಿ ಇಂದು ನಡೆಯಲಿರೋ ಹೈವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದಾರೆ.

Web Stories

Share This Article