ಕೊಲಂಬೊ: 2023ರ ಐಪಿಎಲ್ ಟೂರ್ನಿ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಕೆ.ಎಲ್ ರಾಹುಲ್ (KL Rahul) ಇದೀಗ ಸಂಪೂರ್ಣ ಫಿಟ್ ಆಗಿ ವಾಪಸ್ ಆಗಿದ್ದಾರೆ. ಸುದೀರ್ಘ ಸಮಯದ ಬಳಿಕ ಟೀಂ ಇಂಡಿಯಾಕ್ಕೆ (Team India) ಮರಳಿದ ಮೊದಲ ಪಂದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಏಕದಿನ ಏಷ್ಯಾಕಪ್ ಟೂರ್ನಿಯ ಸೂಪರ್-4ನಲ್ಲಿ (Asia Cup Super Four) ಪಾಕ್ ವಿರುದ್ಧದ ಕಣಕ್ಕಿಳಿದಿರುವ ರಾಹುಲ್ 28 ಎಸೆತಗಳಲ್ಲಿ 17 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 2,000 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಪಂದ್ಯಕ್ಕೆ ಕೃಪೆ ತೋರಿದ್ನಾ ವರುಣ? ರಾತ್ರಿ 7ರ ವರೆಗೂ ಮಳೆ ಮುನ್ಸೂಚನೆ ಇಲ್ಲ
2000 ODI runs and counting for @klrahul ????
Live – https://t.co/Jao6lKkWs5… #INDvPAK #AsiaCup2023 pic.twitter.com/We2YfX06gA
— BCCI (@BCCI) September 10, 2023
ವಿಕೆಟ್‌ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿರುವ ಕೆ.ಎಲ್ ರಾಹುಲ್ 55 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಹಾಗೂ 53 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಕಡಿಮೆ ಇನ್ನಿಂಗ್ಸ್‌ನಲ್ಲಿ ಇಷ್ಟು ರನ್ ಪೂರೈಸಿದ 3ನೇ ಭಾರತೀಯ ಬ್ಯಾಟ್ಸ್‌ಮ್ಯಾನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಈ ಹಿಂದ ಶಿಖರ್ ಧವನ್ 48 ಇನ್ನಿಂಗ್ಸ್‌ಗಳಲ್ಲಿ, ನವಜೋತ್ ಸಿಂಗ್ ಸಿಧು ಮತ್ತು ಸೌರವ್ ಗಂಗೂಲಿ 52 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಜೊತೆಗೆ 3ನೇ ಸ್ಥಾನ ಹಂಚಿಕೊಂಡಿದ್ದಾರೆ.
ಕೆ.ಎಲ್ ರಾಹುಲ್ 45+ ಸರಾಸರಿಯಲ್ಲಿ 2,000 ರನ್ ಪೂರೈಸಿದ್ದು, ಇದರಲ್ಲಿ 5 ಶತಕಗಳು ಹಾಗೂ 13 ಅರ್ಧಶತಕಗಳೂ ಒಳಗೊಂಡಿವೆ. ತವರಿನಲ್ಲೇ ನಡೆದ 20 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 49.00 ಸರಾಸರಿಯಲ್ಲಿ 833 ರನ್ ಗಳಿಸಿದ್ರೆ, ವಿದೇಶಿ ನೆಲದಲ್ಲಿ ನಡೆದ 25 ಪಂದ್ಯಗಳಲ್ಲಿ 38.52 ಸರಾಸರಿಯಲ್ಲಿ 732 ರನ್ ಚಚ್ಚಿದ್ದಾರೆ. ಇದೀಗ ತಟಸ್ಥ ಸ್ಥಳಗಳಲ್ಲಿ 10ನೇ ಪಂದ್ಯ ಆಡುತ್ತಿರುವ ರಾಹುಲ್ 430ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ
16ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಆ ನಂಥೃ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಫಿಟ್ನೆಸ್ ಸಮಸ್ಯೆ ಎದುರಿಸಿದ್ದ ರಾಹುಲ್, ಈ ಬಾರಿ ಏಷ್ಯಾಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸೂಫರ್-4 ಹಂತದಲ್ಲಿ ಪಾಕ್ ವಿರುದ್ಧ ಮೊದಲ ಪಂದ್ಯಕ್ಕೆ ಎಂಟ್ರಕೊಟ್ಟಿದ್ದು ಉತ್ತಮ ರನ್ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ.
Web Stories