ದುಬೈ: ಭಾರತ ವಿರುದ್ಧದ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿಗೆ ಕಾರಣವಾದ ಮೊಹಮ್ಮದ್ ರಿಜ್ವಾನ್ ಪಂದ್ಯದ ಬಳಿಕ ಎಮ್‌ಆರ್‌ಐ ಸ್ಕ್ಯಾನ್‍ಗೆ ಒಳಗಾಗಿದ್ದು, ಮುಂದಿನ ಪಂದ್ಯಗಳಿಂದ ಹೊರಗುಳಿಯುವ ಭೀತಿ ಪಾಕಿಸ್ತಾನ ತಂಡಕ್ಕೆ ಕಾಡುತ್ತಿದೆ.
Advertisement
ಭಾರತ ಬ್ಯಾಟಿಂಗ್ ಮಾಡುತ್ತಿದ್ದಾಗ 15ನೇ ಓವರ್‌ನಲ್ಲಿ ಮೊಹಮ್ಮದ್ ಹಸನೈನ್ ಎಸೆದ ಬೌನ್ಸರ್ ಒಂದನ್ನು ಹಾರಿ ಹಿಡಿಯಲು ಪ್ರಯತ್ನಿಸಿದ ರಿಜ್ವಾನ್ ಬಲಗಾಲಿಗೆ ಗಾಯಮಾಡಿಕೊಂಡಿದ್ದಾರೆ. ಹಾರಿ ಕೆಳಗಿಳಿಯುವಾಗ ನಿಯಂತ್ರಣ ಕಳೆದುಕೊಂಡು ನೋವಿನಿಂದ ಕೆಲಕಾಲ ಒದ್ದಾಡಿದ ರಿಜ್ವಾನ್ ಬಳಿಕ ಕೀಪಿಂಗ್ ಮುಂದುವರಿಸಿದರು. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು
Advertisement
Advertisement
ಇದಾದ ಬಳಿಕ ಭಾರತ ನೀಡಿದ 182 ರನ್‍ಗಳ ಬೃಹತ್ ಗುರಿ ಬೆನ್ನಟ್ಟಲು ನೋವಿನಲ್ಲೂ ಕಣಕ್ಕಿಳಿದ ರಿಜ್ವಾನ್ ಆರಂಭದಿಂದಲೇ ಆಕ್ರಮಣ ಶೈಲಿಯ ಬ್ಯಾಟಿಂಗ್ ಮುಂದಾದರು. ಪಾಕಿಸ್ತಾನ ಗೆಲುವಿಗೆ ಹೋರಾಡಿ 71 ರನ್ (51 ಎಸೆತ, 6 ಬೌಂಡರಿ, 2 ಸಿಕ್ಸ್) ಚಚ್ಚಿ ಮಿಂಚಿದ ರಿಜ್ವಾನ್ ಇದೀಗ ಮುಂದಿನ ಪಂದ್ಯಗಳಲ್ಲಿ ಪಾಕ್ ಪರ ಆಡುವುದು ಅನುಮಾನವಾಗಿದೆ. ಪಂದ್ಯದ ಬಳಿಕ ರಿಜ್ವಾನ್‍ಗೆ ನೋವು ಕಾಣಿಸಿಕೊಂಡಿದ್ದು ಎಮ್‌ಆರ್‌ಐ ಸ್ಕ್ಯಾನಿಂಗ್‍ಗೆ ಒಳಗಾಗಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಪಾಕ್ ಕೈ ಹಿಡಿದ ರಿಜ್ವಾನ್ – ರೋಚಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಜಯ
Advertisement
ರಿಜ್ವಾನ್ ಹೋರಾಟದ ಫಲವಾಗಿ ಭಾರತ ವಿರುದ್ಧ ಪಾಕಿಸ್ತಾನ 182 ರನ್‍ಗಳ ಬೃಹತ್ ಮೊತ್ತವನ್ನು 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿ ಗುರಿ ತಲುಪಿತು. ಇದಕ್ಕೆ ರಿಜ್ವಾನ್ ಬ್ಯಾಟಿಂಗ್ ಪ್ರಮುಖ ಕಾರಣವಾಯಿತು. ಇದನ್ನೂ ಓದಿ: ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್ ಬೆಂಬಲಿಸಿದ ಕಿಂಗ್ ಕೊಹ್ಲಿ