ನವದೆಹಲಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿರುವ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಮೂರನೇ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
2017 ರಲ್ಲಿ ಶ್ರೀಲಂಕಾ ವಿರುದ್ಧದ ರೋಹಿತ್ ಶರ್ಮಾ ನಾಯಕತ್ವ ಟೀಂ ಇಂಡಿಯಾ ಏಕದಿನ ಹಾಗೂ ಟಿ20 ಸರಣಿಯಲ್ಲಿ ಜಯಗಳಿಸಿತ್ತು. 2018 ರ ನಿದಾಸ್ ತ್ರಿಕೋನ ಸರಣಿಯಲ್ಲೂ ತಂಡ ಜಯಗಳಿಸಿತ್ತು. ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಸೆಪ್ಟೆಂಬರ್ 18 ರಂದು ಹಾಂಕಾಂಗ್ ವಿರುದ್ಧ ಟೂರ್ನಿ ಆರಂಭಿಸಲಿರುವ ಟೀಂ ಇಂಡಿಯಾ 19 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
Advertisement
Enroute Dubai✈️ @msdhoni bhai. pic.twitter.com/9V251dm1GN
— Kuldeep yadav (@imkuldeep18) September 13, 2018
Advertisement
ಅಂದಹಾಗೇ 31 ವರ್ಷದ ರೋಹಿತ್ ಶರ್ಮಾ 2007 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಐರ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಏಕದಿನ ಕ್ರಿಕೆಟ್‍ನಲ್ಲಿ 44,98 ಸರಾಸರಿಯಲ್ಲಿ 6,748 ರನ್ ಗಳಿಸಿರುವ ರೋಹಿತ್ 18 ಶತಕ, 34 ಅರ್ಧ ಶತಕ ಸಿಡಿಸಿದ್ದಾರೆ. ಇನ್ನು ಏಕದಿನ ತಂಡದ ನಾಯಕತ್ವದಲ್ಲಿ 3 ಪಂದ್ಯಗಳನ್ನು ಆಡಿರುವ ರೋಹಿತ್ 217 ರನ್ ಗಳಿಸಿದ್ದು, ಕಳೆದ ವರ್ಷ ಶ್ರೀಲಂಕಾ ವಿರುದ್ಧ ದ್ವಿಶತಕ (208 ರನ್) ಸಿಡಿಸಿದ್ದರು.
Advertisement
ಟಿ20 ಮಾದರಿಯಲ್ಲಿ 3 ಶತಕಗಳನ್ನು ಸಿಡಿಸಿರುವ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲೂ 3 ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2013 ರಲ್ಲಿ ಆಸೀಸ್ ಎದುರು ಚಿನ್ನಸ್ವಾಮಿ ಕ್ರೀಡಾಂಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ದ್ವಿಶತಕ ಗಳಿಸಿದ್ದರು. ಉಳಿದಂತೆ ನವೆಂಬರ್ 13, 2014 ಮುಂಬೈ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೊಂದು ದ್ವಿಶತಕ ಸಿಡಿಸಿದ್ದರು.
Advertisement
ಸದ್ಯ ಯುಎಇ ನಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾವನ್ನು ಎರಡು ತಂಡಗಳಲ್ಲಿ ಕಳುಹಿಸಲು ಸಿದ್ಧತೆ ನಡೆಸಿದ್ದು, ಮೊದಲ ಬಾರಿಗೆ ರೋಹಿತ್ ಶರ್ಮಾ, ಮಾಜಿ ನಾಯಕ ಧೋನಿ ಸೇರಿದಂತೆ ಹಲವು ಆಟಗಾರರ ತಂಡ ಯುಎಇಗೆ ತಲುಪಿದೆ. ಇನ್ನು ಎರಡನೇ ತಂಡ ನೇರ ಇಂಗ್ಲೆಂಡ್‍ನಿಂದ ಯುಎಇ ಗೆ ಪ್ರಯಾಣ ಬೆಳೆಸಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv