ಹೈದರಾಬಾದ್: ಕಂಠಪೂರ್ತಿ ಕುಡಿದು ಮಹಿಳೆಯೊಂದಿಗೆ ಪೊಲೀಸ್ ಠಾಣೆಯಲ್ಲಿ ಚಕ್ಕಂದ ಆಡಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿರಿಯ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ (ಎಎಸ್‍ಐ) ಅನ್ನು ಅಮಾನತುಗೊಳಿಸಲಾಗಿದೆ.
ಹೌದು, ಪೊಲೀಸ್ ಠಾಣೆಯನ್ನೇ ತಮ್ಮ ಬೆಡ್ ರೂಮ್ ಮಾಡಿಕೊಂಡಿದ್ದ ಎಎಸ್‍ಐ ಅಪ್ಪಾರಾವ್ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ವೇಳೆ ದಿಢೀರ್ ಹಿರಿಯ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಅಪ್ಪಾರಾವ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಕೋಪಗೊಂಡಿದ್ದ ಅಧಿಕಾರಿಗಳು ಮಹಿಳೆಗೆ ಛೀಮಾರಿ ಹಾಕಿ ಪೊಲೀಸ್ ಠಾಣೆಯಿಂದ ಹೊರ ಕಳುಹಿಸಿದ್ದಾರೆ. ಇದೇ ಸಮಯದಲ್ಲಿ ಹಿರಿಯ ಅಧಿಕಾರಿಗಳ ಕಾಲಿಗೆ ಬಿದ್ದು ಎಎಸ್‍ಐ ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ – ಏಷ್ಯಾಗೆ ಇದು ಫಸ್ಟ್ ಟೈಂ
ರವಿಕಾಮಥಮ್ ಪೊಲೀಸ್ ಠಾಣೆಯ ಎಎಸ್‍ಐ ಅಪ್ಪಾರಾವ್ ಅವರನ್ನು ಅದೇ ಜಿಲ್ಲೆಯ ಕೊಥಕೊಟ ಪೊಲೀಸ್ ಠಾಣೆಯ ಸಿಬ್ಬಂದಿ ಕೊರತೆಯಿಂದ ಕೆಲ ದಿನಗಳ ಕಾಲ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಅದರಲ್ಲೂ ಮುಖ್ಯವಾಗಿ ನೈಟ್ ಡ್ಯೂಟಿ ಮಾಡಲು ಸೂಚಿಸಲಾಗಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಅಪ್ಪಾರಾವ್ ಕಂಠಪೂರ್ತಿ ಕುಡಿದು ಮಹಿಳೆಯನ್ನು ರಾತ್ರಿ 10.30ರ ಸುಮಾರಿಗೆ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಕೆಯನ್ನು ತಕ್ಷಣವೇ ಬಿಟ್ಟು ಬರುವಂತೆ ತಿಳಿಸಿದ್ದ ಪೇದೆಗೆ ನಾನು ಎಎಸ್‍ಐ ನೀನು ಹೇಳಿದ್ದನ್ನು ಮಾಡುವುದು ನನ್ನ ಕೆಲಸವಲ್ಲ ಎಂದು ಅವಾಜ್ ಹಾಕಿದ್ದಾರೆ.
ಬಳಿಕ ಈ ಬಗ್ಗೆ ಪೊಲೀಸ್ ಪೇದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ ಅಧಿಕಾರಿಗಳಿಗೆ ಅಪ್ಪಾರಾವ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಅಪ್ಪಾರಾವ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: KSRTC ಬಸ್ ನಿಲ್ದಾಣ ಜಲಾವೃತ- 20ಕ್ಕೂ ಹೆಚ್ಚು ಬಸ್‍ಗಳು ಮುಳುಗಡೆ