ಬೆಂಗಳೂರು: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೊದಲು ಭಾರತೀಯನಾ ಅಂತ ಕೇಳಿಕೊಳ್ಳಲಿ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶ್ವಥ್ ನಾರಾಯಣ ಕಿಡಿಕಾರಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕದ ನಾಮಫಲಕಗಳಿರುವ ವಾಹನಗಳ ಮೇಲೆ ಕಲ್ಲು ತೂರಾಟದ ಪ್ರಕರಣ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಮಹಾರಾಷ್ಟ್ರದಲ್ಲಿ ಸರಿಯಾದ ಆಡಳಿತವನ್ನು ಮೊದಲು ನಡೆಸುವ ಜೊತೆಗೆ ಭಾರತೀಯತೆಯನ್ನು ಕಲಿಯಲಿ ಎಂದು ತಿಳಿಸಿದರು.
Advertisement
Advertisement
ಕಾಂಗ್ರೆಸ್ ಅವರು ಕೇವಲ ರಾಜಕಾರಣ ಮಾಡುವುದಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಮೊದಲು ಮಹಾರಾಷ್ಟ್ರ ಸರ್ಕಾರ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರನ್ನು ಬಂಧಿಸಲಿ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಸಾರ್ವಜನಿಕ ಸ್ಥಳಗಳಲ್ಲಿ ದುಷ್ಕೃತ್ಯ ಮಾಡುವವರ ಮನಸ್ಸಲ್ಲಿ ಏನಿದೆ ಎನ್ನುವುದನ್ನು ಮೊದಲೇ ಪತ್ತೆ ಮಾಡಲು ಆಗುವುದಿಲ್ಲ. ಕೆಲ ಪಕ್ಷಗಳು ರಾಜಕೀಯಕ್ಕಾಗಿ ಮೊದಲು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮೊದಲು ನಿಲ್ಲಿಸಲಿ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶದ ಉದ್ದದ ಎಕ್ಸ್‌ಪ್ರೆಸ್‌ವೇಗೆ ಮೋದಿ ಶಂಕುಸ್ಥಾಪನೆ
ನಮ್ಮ ಸರ್ಕಾರ ದುಷ್ಕೃತ್ಯ ಎಸಗಿದವರನ್ನು ತಕ್ಷಣ ಬಂಧಿಸಿದೆ. ಇಂಥ ದುಷ್ಕೃತ್ಯ ಮಾಡುವವರನ್ನು ನಾವು ಎಂದಿಗೂ ಸಹಿಸೋದಿಲ್ಲ. ಸ್ಪಷ್ಟ ಎಚ್ಚರಿಕೆ ಕೊಡ್ತೇವೆ ಇಂಥ ಕೆಲಸಗಳನ್ನು ನಾವು ಸಹಿಸುವುದಿಲ್ಲ. ಬೆಂಗಳೂರು, ಬೆಳಗಾವಿ ಎರಡೂ ಕಡೆ ಕಿಡಿಗೇಡಿಗಳನ್ನು ನಾವು ಬಂಧಿಸಿದ್ದೇವೆ. ಇದರಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಏನೂ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: 100 ಕೋಟಿ ರೂ. ಮೌಲ್ಯದ ಒತ್ತುವರಿ ತೆರವು ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ!