Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 6 ತಿಂಗಳಲ್ಲಿ ಸ್ಯಾಂಕಿ ಕೆರೆ ಸಮಗ್ರ ಅಭಿವೃದ್ಧಿ: ಸಚಿವ ಅಶ್ವತ್ಥನಾರಾಯಣ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 6 ತಿಂಗಳಲ್ಲಿ ಸ್ಯಾಂಕಿ ಕೆರೆ ಸಮಗ್ರ ಅಭಿವೃದ್ಧಿ: ಸಚಿವ ಅಶ್ವತ್ಥನಾರಾಯಣ

Bengaluru City

6 ತಿಂಗಳಲ್ಲಿ ಸ್ಯಾಂಕಿ ಕೆರೆ ಸಮಗ್ರ ಅಭಿವೃದ್ಧಿ: ಸಚಿವ ಅಶ್ವತ್ಥನಾರಾಯಣ

Public TV
Last updated: March 30, 2022 2:02 pm
Public TV
Share
1 Min Read
ASHWATH 3
SHARE

ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯನ್ನು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಸಾರ್ವಜನಿಕರ ಸಲಹೆಗಳನ್ನು ಕೂಡ ಇದರಲ್ಲಿ ಪರಿಗಣಿಸಲಾಗಿದೆ. ಗರಿಷ್ಠ 6 ತಿಂಗಳಲ್ಲಿ ಕೆರೆಯ ಸೌಂದರ್ಯವೃದ್ಧಿ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನೂ ಮುಗಿಸಲಾಗುವುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬುಧವಾರ ಬೆಳಿಗ್ಗೆ ಸ್ಯಾಂಕಿ ಕೆರೆಯಲ್ಲಿ ಪಾದಯಾತ್ರೆ ಮಾಡಿ, ಸ್ಯಾಂಕಿ ಕೆರೆ ನಡಿಗೆದಾರರ ಸಂಘದ ಸದಸ್ಯರೊಂದಿಗೆ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣೆ ಬಗ್ಗೆ ಅವರು ಮುಕ್ತ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಯನ್ನೂ ನಡೆಸಿದರು.

sanki

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಕೆರೆಯ ಆವರಣದಲ್ಲಿ ಎರಡು ಓಪನ್ ಜಿಮ್ ಗಳಿವೆ. ಅದರಲ್ಲಿ ಒಂದು ಕೆಟ್ಟಿದೆ. ಅದನ್ನು ಸರಿಪಡಿಸಲಾಗುವುದು. ಅದರ ಜೊತೆಗೆ ಇನ್ನೂ ನಾಲ್ಕು ಓಪನ್ ಜಿಮ್ ಸ್ಥಾಪಿಸಲಾಗುವುದು. ಇದಕ್ಕೆ ನಡಿಗೆದಾರರ ಸಂಘದ ಸದಸ್ಯರೇ ಜಾಗವನ್ನು ಗುರುತಿಸಬೇಕು. ಸಂಘವು ಹೇಳಿದ ಜಾಗದಲ್ಲಿ ಈ ಜಿಮ್ ಸ್ಥಾಪಿಸಲಾಗುವುದು ಎಂದರು. ಇದನ್ನೂ ಓದಿ: ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈಬಿಟ್ಟಿಲ್ಲ: ಶಾಸಕ ಎನ್.ಮಹೇಶ್

ಕೆರೆಯ ಸೌಂದರ್ಯೀಕರಣಕ್ಕೆ ಒತ್ತು ಕೊಡಲಾಗಿದ್ದು, ನೀರು ಮಲಿನಗೊಳ್ಳದಂತೆ ಎಚ್ಚರ ವಹಿಸಲಾಗುವುದು. ಜೊತೆಗೆ, ಹೊರಭಾಗದ ಕೊಳಚೆ ನೀರು ಯಾವ ಕಾರಣಕ್ಕೂ ಕೆರೆಗೆ ಸೇರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Ashwath Narayan

ಕೊರೊನಾ ಹಾವಳಿ ಈಗ ಬಹುತೇಕ ಇಲ್ಲದಂತಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಹೀಗಾಗಿ, ಕೆರೆಗೆ ವಾಯುವಿಹಾರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದೆ ಹಣಕಾಸಿನ ತೊಂದರೆಯಾಗಿ ಕೆರೆಯಲ್ಲಿ ಹಂತಹಂತವಾಗಿ ಕಾಮಗಾರಿಗಳನ್ನು ನಡೆಸಿದ್ದರಿಂದ ಕೆಲವು ಅನನುಕೂಲಗಳಾಗಿದ್ದವು. ಆದರೆ ಈ ಬಾರಿ ಒಂದೇ ಸುತ್ತಿನಲ್ಲಿ ಸಮಗ್ರ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಿಂದೂ ಸಮಾಜದ ಬಹು ಕಾಲದ ನೋವು ಬೇಸರ ಸ್ಫೋಟಗೊಂಡಿದೆ- ಪೇಜಾವರ ಶ್ರೀ

ಪಾದಯಾತ್ರೆಯಲ್ಲಿ ನಡಿಗೆದಾರರ ಸಂಘದ ಅಧ್ಯಕ್ಷ ರಂಗನಾಥ್, ಬಿಬಿಎಂಪಿ ಪಶ್ಚಿಮ ವಿಭಾಗದ ಆಯುಕ್ತ ದೀಪಕ್, ಜಂಟಿ ಆಯುಕ್ತ ಶ್ರೀನಿವಾಸ್, ಕೆರೆಗಳ ವಿಭಾಗದ ಪ್ರಧಾನ ಎಂಜಿನಿಯರ್ ವಿಜಯಕುಮಾರ್ ಮುಂತಾದವರಿದ್ದರು.

TAGGED:Ashwath NarayanbengaluruSankey Lakeಅಶ್ವತ್ಥನಾರಾಯಣಬೆಂಗಳೂರುಸ್ಯಾಂಕಿ ಕೆರೆ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

British Flight Attendant Arrest
Latest

ಡ್ರೋನ್ ದಾಳಿಯ ಪೋಟೊ ಹಂಚಿಕೊಂಡಿದ್ದಕ್ಕೆ ಬ್ರಿಟಿಷ್ ಫ್ಲೈಟ್ ಅಟೆಂಡೆಂಟ್ ದುಬೈನಲ್ಲಿ ಅರೆಸ್ಟ್‌

Public TV
By Public TV
13 minutes ago
f 15e strike eagle how rescued
Latest

ಫೈಟರ್‌ ಜೆಟ್‌ನಿಂದ ಬಿದ್ದ ಪೈಲಟ್‌ನನ್ನು ಅಮೆರಿಕ ನಿಖರವಾಗಿ ಇರಾನ್‌ ನೆಲದಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದು ಹೇಗೆ?

Public TV
By Public TV
28 minutes ago
Mohsin Naqvi
Cricket

ಐಪಿಎಲ್‌ ಅನ್ನು ಪಿಎಸ್‌ಎಲ್‌ ಹಿಂದಿಕ್ಕಿ ವಿಶ್ವದ ನಂ.1 ಲೀಗ್‌ ಆಗುತ್ತೆ: ಮೊಹ್ಸಿನ್‌ ನಖ್ವಿ

Public TV
By Public TV
52 minutes ago
Siddaganga Mutt
Districts

ಸಿದ್ದಗಂಗಾ ಮಠದಲ್ಲಿ 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ

Public TV
By Public TV
1 hour ago
zameer ahmed s.s.mallikarjun
Davanagere

ಎಷ್ಟೇ ಒತ್ತಾಯ ಮಾಡಿದ್ರೂ ದಾವಣಗೆರೆಯಲ್ಲಿ ಪ್ರಚಾರಕ್ಕೆ ಒಪ್ಪದೇ ತೆರಳಿದ ಜಮೀರ್

Public TV
By Public TV
1 hour ago
Hyderabad truck accident
Crime

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿಮೀ ಎಳೆದೊಯ್ದ ಟ್ರಕ್‌ – ಮಹಿಳೆ ಸಾವು, ಪತಿಗೆ ಗಾಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?