ಮಂಡ್ಯ: ಟಿಪ್ಪು (Tippu) ಹೊಡೆದಾಕಿದ ಹಾಗೆ ಸಿದ್ದರಾಮಯ್ಯರನ್ನು (Siddaramaiah) ಹೊಡೆದು ಹಾಕಬೇಕೆಂದು ಹೇಳಿದ್ದ ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ವಿರುದ್ಧ ಮೈಸೂರಿನ (Mysuru) ದೇವರಾಜ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ದೇವರಾಜ ಪೊಲೀಸರು ಸ್ಥಳ ಮಹಜರ್ ಬಳಿಕ ಈ ಕೇಸ್ ಅನ್ನು ಮಂಡ್ಯಗೆ (Mandya) ವರ್ಗಾವಣೆ ಮಾಡಿದ್ದಾರೆ.
ಮಂಡ್ಯದ ಸಾತನೂರಿನ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಶ್ವಥ್ ನಾರಾಯಣ್ ಹೀಗೆ ಹೇಳಿದ್ದರು. ಈ ಕಾರಣ ನಿನ್ನೆ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ ಬಳಿಕ ಮಂಡ್ಯ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ.
Advertisement
Advertisement
ಫೆಬ್ರವರಿ 14 ರಂದು ನಡೆದಿದ್ದ ಬೂತ್ ಮಟ್ಟದ ಕಾರ್ಯಕರ್ತ ಸಭೆಯಲ್ಲಿ ಟಿಪ್ಪು ಹೊಡೆದಂತೆ ಸಿದ್ದರಾಮಯ್ಯರನ್ನು ಹೊಡೆದಾಕಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದ್ದರು. ಅಶ್ವಥ್ ನಾರಾಯಣ್ ಹೇಳಿಕೆಗೆ ಬಳಿಕ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರೆಂಟಿ ಎಫೆಕ್ಟ್ – 6 ದಿನಗಳಲ್ಲಿ ಬರೋಬ್ಬರಿ 78 ಸಾವಿರ ಬಿಪಿಎಲ್ ಅರ್ಜಿ ಸಲ್ಲಿಕೆ
Advertisement
Advertisement
ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ ಮೈಸೂರಿನ ದೇವರಾಜ ಠಾಣೆಗೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ದೂರು ನೀಡಿದ್ದರು. ದೂರಿನ ಆಧಾರ ಎಫ್‌ಐಆರ್ ದಾಖಲು ಮಾಡಿದ್ದ ದೇವರಾಜ ಠಾಣೆ ಪೊಲೀಸರು ಸ್ಥಳ ಮಹಜರ್ ಮಾಡಿ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯನವರಿಗೆ ಅವಮಾನ ಮಾಡಬೇಡಿ: ಅಶೋಕ್