ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ಸ್ಫೋಟಕ್ಕೆ ಕಾರಣ ಫ್ರಿಡ್ಜ್?

Public TV
2 Min Read
APARTMENT FIRE

ಬೆಂಗಳೂರು: ದೇವರಚಿಕ್ಕನಹಳ್ಳಿ ಅಪಾರ್ಟ್‍ಮೆಮಟ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಫ್ರಿಡ್ಜ್ ಸ್ಫೋಟದಿಂದಲೇ ತಾಯಿ-ಮಗಳು ಸಾವನ್ನಪ್ಪಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.

APARTMENT FIRE 1

ಅಪಾರ್ಟ್‍ಮೆಂಟ್‍ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ತಂಡದ ತನಿಖೆ ವೇಳೆ ಫ್ರಿಡ್ಜ್ ನಿಂದಲೇ ಬೆಂಕಿ ಹತ್ತಿಕೊಂಡಿರೋ ಶಂಕೆ ವ್ಯಕ್ತಪಡಿಸಿದೆ. ಬೆಂಕಿ ಹತ್ತಿಕೊಂಡ ಫ್ಯಾಟ್ ಪರಿಶೀಲನೆ ಬಳಿಕ ಎಫ್‍ಎಸ್‍ಎಲ್ ತಂಡ ಮಾಹಿತಿ ನೀಡಿದ್ದು, ಗ್ಯಾಸ್ ಪೈಪ್ ಲೀಕ್ ಆಗಿದ್ದರೂ ಸಿಲಿಂಡರ್ ಸ್ಫೋಟವಾಗಿಲ್ಲ. ಬೆಂಕಿ ಹತ್ತಿಕೊಂಡ ಇಡೀ ಫ್ಯಾಟ್ ಪರಿಶೀಲಿಸಲಾಗಿದ್ದು, ಹಾಲ್, ಅಡುಗೆ ಮನೆ, ಕೊಠಡಿ, ಬಾತ್ ರೂಂ ಕೂಡ ಪರಿಶೀಲನೆ ಮಾಡಲಾಗಿದೆ. ಟಿವಿ, ವಾಷಿಂಗ್ ಮಿಷನ್, ಚಾರ್ಜಿಂಗ್ ಪೋರ್ಟ್ ಕೂಡ ಪರಿಶೀಲನೆ ನಡೆಸಿದೆ. ಎಲ್ಲೂ ಕೂಡ ಶಾರ್ಟ್ ಸರ್ಕ್ಯೂಟ್ ಆಗಿರೋ ಸುಳಿವಿಲ್ಲ. ಫ್ರಿಡ್ಜ್ ಸ್ಫೋಟದಿಂದ ಬೆಂಕಿ ಹತ್ತಿಕೊಂಡಿರೋ ಬಗ್ಗೆ ಸಂಶಯ ಮೂಡಿದೆ ಎಂದು ತಿಳಿಸಿದೆ.

APARTMENT FIRE 6

ಅಪಾರ್ಟ್‍ಮೆಂಟ್ ಗ್ಯಾಸ್ ಲೀಕೆಜ್ ಬಗ್ಗೆಯೂ ಮಾಹಿತಿ ಪಡೆದ ಪೊಲೀಸರು, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಕರೆತಂದು ಪರಿಶೀಲನೆ ನಡೆಸಿದ್ದು, ಗ್ಯಾಸ್ ಲೀಕೆಜ್ ಆಗಿದ್ಯಾ ಎಂಬ ಮಾಹಿತಿ ಪಡೆದು. ಬೆಸ್ಕಾಂ ಸಿಬ್ಬಂದಿಯಿಂದಲೂ ಸ್ವಿಚ್ ಬೋರ್ಡ್‍ಗಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಹೊತ್ತಿ ಉರಿದ ಬೆಂಗಳೂರಿನ ಫ್ಲ್ಯಾಟ್ – ನೋಡನೋಡುತ್ತಲೇ ಮಹಿಳೆ ಸಜೀವ ದಹನ

ಮಾಲೀಕರ ನಿರ್ಲಕ್ಷ್ಯ..?
ಅಗ್ನಿ ದುರಂತಕ್ಕೆ ಬಿಬಿಎಂಪಿ, ಅಪಾರ್ಟ್ ಮೆಂಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಅಂತ ಹೇಳಲಾಗುತ್ತಿದೆ. ಅಪಾರ್ಟ್ ಮೆಂಟ್‍ನಲ್ಲಿ ರೂಲ್ಸ್ ಫಾಲೋನೇ ಆಗಿಲ್ಲ. ಹೀಗಾಗಿ ಈ ಇಬ್ಬರ ನಿರ್ಲಕ್ಷ್ಯದಿಂದ ಎರಡು ಜೀವಗಳು ಸಜೀವ ದಹನವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

APARTMENT FIRE 2

ಅಪಾರ್ಟ್ ಮೆಂಟ್‍ನಲ್ಲಿ ಜನರನ್ನು ಎಚ್ಚರಿಸುವ ಸೈರನ್ ವ್ಯವಸ್ಥೆ ಇಲ್ಲ. ಬೆಂಕಿ, ಹೊಗೆ ನಂದಿಸಲು ವಾಟರ್ ಲೈನ್ ವ್ಯವಸ್ಥೆ ಇಲ್ಲ. ಪ್ರತಿ ಅಂತಸ್ತಿನಲ್ಲಿ ರಾಸಾಯನಿಕ ಮಿಶ್ರಿತ ಬೆಂಕಿ ನಂದಿಸುವ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇಲ್ಲ. ಅಪಾರ್ಟ್‍ಮೆಂಟ್ ಅಕ್ಕಪಕ್ಕ ಟ್ರಾನ್ಸ್ ಫಾರ್ಮರ್ ಇರಬಾರದು. ಆದರೆ ಅಪಾರ್ಟ್‍ಮೆಂಟ್ ಕಾಂಪೌಂಡ್ ಒಳಗೇ ಟ್ರಾನ್ಸ್ ಫಾರ್ಮರ್ ಇದೆ. ಇದ್ಯಾವುದನ್ನೂ ಬಿಬಿಎಂಪಿ ಪರಿಶೀಲನೆ ಮಾಡಿಯೇ ಇಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ

ಒಟ್ಟಿನಲ್ಲಿ ಅಗ್ನಿ ಅವಘಢ ಸಂಭಿಸಿದ ಪರಿಣಾಮ ನೋಡ ನೋಡುತ್ತಿದ್ದಂತೆಯೇ ತಾಯಿ-ಮಗಳು ಸಜೀವ ದಹನಾಗಿದ್ದಾರೆ. ಇಂದು ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆರವೇರಿಸಿ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಇದನ್ನೂ ಓದಿ: ಹಾಲ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂದ್ರು: ಭಾಗ್ಯ ರೇಖಾ ಅಳಿಯ ಕಣ್ಣೀರು

Share This Article