Bengaluru CityCrimeDistrictsKarnatakaLatestMain Post

ಹಾಲ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂದ್ರು: ಭಾಗ್ಯ ರೇಖಾ ಅಳಿಯ ಕಣ್ಣೀರು

ಬೆಂಗಳೂರು: ಹಾಲ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂತ ಕರೆದ್ರು. ಆದರೆ ಅವರನ್ನು ನನಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿರುವ ಭಾಗ್ಯ ರೇಖಾ ಅವರ ಅಳಿಯ ಸಂದೀಪ್ ಕಣ್ಣೀರು ಹಾಕಿದ್ದಾರೆ.

ಘಟನೆ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಾಲ್ ನಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ನನಗೆ ಫೋನ್ ಮಾಡಿ, ಹಾಲ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂತ ಕರೆದ್ರು. ಕರೆ ಬಂದ ಕೂಡಲೇ ನಾನು ಓಡಿ ಹೋದೆ. ಹೀಗೆ ಓಡಿ ಹೋದಾಗಿ ಬಾಗಿಲು ತೆರೆದ ತಕ್ಷಣ ನಮ್ಮ ಮೇಲೂ ಬೆಂಕಿ ಬಂತು ಎಂದರು. ಪಕ್ಕದಲ್ಲೇ ನಮ್ಮ ಫ್ಲ್ಯಾಟ್ ಇದ್ದು, ದುರಂತದ ವೇಳೆ ನಾನು ಕೂಡ ಫ್ಲ್ಯಾಟ್ ನಲ್ಲೇ ಇದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ

ಇತ್ತ ಆಗ್ನೇಯ ವಲಯ ಡಿಸಿಪಿ ಶ್ರೀನಾಥ್ ಜೋಶಿ ಮಾತನಾಡಿ, ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಸ್ಫೋಟ ಕಾರಣವಲ್ಲ. ಯಾವುದೋ ವಸ್ತುವಿನಿಂದ ಮೊದಲು ಬೆಂಕಿ ಹೊತ್ತಿಕೊಂಡಿರಬಹುದು. ನಂತರ ಮನೆಯಲ್ಲಿ ಉಳಿದ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಬೆಂಕಿ ಹಬ್ಬಿದೆ. ಆ ಬಳಿಕ ಮನೆಯ ಎಲ್ಲಾ ಕಡೆ ಬೆಂಕಿ ಹಬ್ಬಿದೆ. ಇಂದು ಘಟನಾ ಸ್ಥಳಕ್ಕೆ ಎಲೆಕ್ಟ್ರಿಕಲ್ ಎಂಜಿನಿಯರ್ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಅಲ್ಲದೆ ಎಫ್‍ಎಸ್‍ಎಲ್ ತಂಡದಿಂದಲೂ ಫ್ಲ್ಯಾಟ್ ಗೆ ಭೇಟಿ ಕೊಡಲಿದ್ದಾರೆ. ಇದನ್ನೂ ಓದಿ: ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲ ಮಾದಪ್ಪನ ದರ್ಶನ- ಭಕ್ತರ ಆಕ್ರೋಶ

ಒಟ್ಟಿನಲ್ಲಿ ಬೇಗೂರು ಅಪಾರ್ಟ್ ಮೆಂಟ್ ನಲ್ಲಿ ನಡೆದ ಅಗ್ನಿ ಅವಘಡಕ್ಕೆ ತಾಯಿ- ಮಗಳು ಬಲಿಯಾಗಿದ್ದಾರೆ. ಫ್ಲ್ಯಾಟ್ ನಲ್ಲಿ ಗ್ರಿಲ್ ಅಳವಡಿಸಿದ್ದರಿಂದ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ತಾಯಿ- ಮಗಳು ಹೊರಬರಲು ಸಾಧ್ಯವಾಗದೆ ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾದರು. ಇದೀಗ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆರವೇರಿಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

Leave a Reply

Your email address will not be published. Required fields are marked *

Back to top button