ಬೆಂಗಳೂರು: ಕಾಂಗ್ರೆಸ್‌ನೊಳಗೆ ಕ್ರಾಂತಿ ಆಗುವ ಬಗ್ಗೆ ಮತ್ತೆ ಬಿಜೆಪಿ ನಾಯಕರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಲ್ಲಿ (Bengaluru) ಮಾತಾಡಿದ ಆರ್ ಅಶೋಕ್, ಕಾಂಗ್ರೆಸ್‌ನಲ್ಲಿ ಅಕ್ಟೋಬರ್ ಕ್ರಾಂತಿಯಾಗುವ ಲಕ್ಷಣಗಳು ಕಂಡುಬಂದಿವೆ. ಕ್ರಾಂತಿಯ ನಂತರ ಸಿಎಂ ಬದಲಾವಣೆಯಾಗುವ ಲಕ್ಷಣವಿದೆ. ಸರ್ಕಾರ ಅಸ್ಥಿರಗೊಂಡು ಬಿದ್ದುಹೋದರೆ ಚುನಾವಣೆ ಮಾಡುವುದು ಸೂಕ್ತ. ನಾವು ಕಾಂಗ್ರೆಸ್‌ನಂತೆ (Congress) ಸರ್ಕಾರ ಬೀಳಿಸಲು ಹೋಗಲ್ಲ. ಎರಡೂವರೆ ವರ್ಷಗಳಲ್ಲಿ ಸರ್ಕಾರ ಟೇಕಾಫ್ ಆಗಿಲ್ಲ. ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದು ಸೂಕ್ತ ಎಂದರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಗಳ ತನಿಖೆ ಆದಷ್ಟು ಬೇಗ ಮುಕ್ತಾಯ: ಪರಮೇಶ್ವರ್
ನಾವು ನಾಲ್ಕೈದು ತಿಂಗಳಿನಿಂದ ಅಕ್ಟೋಬರ್ (October) ಕ್ರಾಂತಿ ಬಗ್ಗೆ ಹೇಳುತ್ತಿದ್ದೆವು. ಈಗ ಮಂತ್ರಿಯೇ ಕ್ಯಾಬಿನೆಟ್ (Cabinet) ಪುನರ್ ರಚನೆ ಎಂದು ಹೇಳಿದ್ದಾರೆ. ಪುನರ್ ರಚನೆ ಅಂದರೆ ಮುಖ್ಯಮಂತ್ರಿಯೂ ಸೇರಿ ಬದಲಾಗ್ತಾರೆ. ಅಕ್ಟೋಬರ್ ಕ್ರಾಂತಿ ಎಂದ ಕಾಂಗ್ರೆಸ್ ನಾಯಕರು ಮನೆಗೆ ಹೋಗಿದ್ದಾರೆ. ಈಗ ಹೇಳುತ್ತಿರುವವರೂ ಮನೆಗೆ ಹೋಗುತ್ತಾರೆ. ಅಕ್ಟೋಬರ್ ಕ್ರಾಂತಿ ಬಳಿಕ ಕಾಂಗ್ರೆಸ್ ನಲ್ಲಿ ವಾಂತಿಯೂ ಆಗುತ್ತದೆ ಅಂತ ಅಶೋಕ್ (R Ashok) ಎಂದು ನುಡಿದರು.
ಇನ್ನು ಶಾಸಕ ಸುನಿಲ್ ಕುಮಾರ್ (Sunil Kumar) ಮಾತನಾಡಿ, ಕ್ಯಾಬಿನೆಟ್‌ಗೆ ಯಾರು ಬರ್ತಾರೆ, ಯಾರು ಬರಲ್ಲ ಅಂತ ಮುಖ್ಯಮಂತ್ರಿ ಹೇಳಬೇಕು. ಜಮೀರ್ ಅಧಿಕೃತವಾಗಿ ಸಾರ್ವಜನಿಕವಾಗಿ ಹೇಳಿದರೆ ಈ ರಾಜ್ಯದ ಸಿಎಂ ಯಾರು ಹಾಗಾದರೆ? ಜಮೀರ್ ಅವರಾ?ಸಿದ್ದರಾಮಯ್ಯನವರಾ? ಅಕ್ಟೋಬರ್ ಕ್ರಾಂತಿ ಅಂತ ಹೇಳಿದವರು ಎಲ್ಲ ಮನೆ ಸೇರ್ಕೊಳ್ತಿದ್ದಾರೆ. ಜಮೀರ್ ಅವರು ಮನೆ ಸೇರ್ಕೊಳೋಕೆ ಈ ಹೇಳಿಕೆ ಕೊಟ್ಟಿದಾರೋ? ಸಿದ್ದರಾಮಯ್ಯ ಅವರಿಗೆ ಮನೆ ಸೇರ್ಸೋಕೆ ಹೇಳಿಕೆ ಕೊಟ್ಟಿದಾರೋ? ಕ್ರಾಂತಿ ಅವರ ಪಾರ್ಟಿ ಒಳಗೇ ಆಗಲಿ, ಅದು ಏನ್ ಬೇಕಾದರೂ ಆಗಲಿ. ಆದರೆ ರಾಜ್ಯದ ಜನರಿಗೆ ತೊಂದರೆ ಆಗದೇ ಇರಲಿ ಎಂದು ಹೇಳಿದರು.

