ಚಿಕ್ಕೋಡಿ: ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕನಸು. ರಾಜ್ಯದಲ್ಲಿ ಈ ಪದ್ಧತಿ ಅಳವಡಿಸಲು ಪೈಲಟ್ ಯೋಜನೆಗೆ ಸರ್ಕಾರ ಮುಂದಾಗಿದೆ. ಆದ್ರೆ ಇದಕ್ಕೆ ಮೊದಲೇ ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹುಕ್ಕೇರಿ ತಾಲೂಕಿನ ಬೆಣವಾಡ ರೈತ ಅಶೋಕ ಪಾಟೀಲರು ಯಶಸ್ಸನ್ನು ಕಂಡಿದ್ದಾರೆ.
ಬಿಎಸ್‍ಸಿ ಅಗ್ರಿ ಪದವೀಧರರಾದ ಪಾಟೀಲರು, ಕಳೆದ 3-4 ವರ್ಷಗಳಿಂದ ಇಸ್ರೇಲ್ ಮಾದರಿ ಕೃಷಿ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. 25 ಎಕರೆಯಲ್ಲಿ ಕಬ್ಬು, ಜೊತೆಗೆ 10 ಅಡಿ ಅಂತರದಲ್ಲಿ ಸೋಯಾಬೀನ್, ದ್ವಿದಳ ಧಾನ್ಯ, ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಜಮೀನಿನ ರಸ್ತೆಯಲ್ಲಿ ಕಮಾನು ನಿರ್ಮಿಸಿ ತೊಂಡಲಿ ಬೆಳೆದು ಅಲ್ಲೂ ಲಾಭ ಕಾಣ್ತಿದ್ದಾರೆ.
Advertisement
Advertisement
ಭೂಮಿಯಲ್ಲಿ ವಿಶೇಷ ಡ್ರಿಪ್ ಅಳವಡಿಸಿ ಕೃಷಿಗೆ ಕಡಿಮೆ ನೀರು ಬಳಕೆ ಮಾಡುತ್ತಿರುವ ರೈತ ಅಶೋಕ ಪಾಟೀಲರು, ಕಳೆಯನ್ನೂ ವೇಸ್ಟ್ ಮಾಡ್ತಿಲ್ಲ. ಬದಲಾಗಿ ಅದನ್ನೇ ಗೊಬ್ಬರವಾಗಿಸುತ್ತಿದ್ದಾರೆ. ಕಬ್ಬು ಕಟಾವಿಗೆ ಹೊಸ ಯಂತ್ರ ಕಂಡು ಹಿಡಿದಿದ್ದಾರೆ. ಬೇರೆ ರೈತರಿಗೂ ಆಧುನಿಕ ಕೃಷಿ ಪದ್ಧತಿ ಬಗ್ಗೆ ಸಲಹೆ ನೀಡುತ್ತಿದ್ದಾರೆ.
Advertisement
ಅಂದಹಾಗೆ, 5 ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ಚೀನಾ ಪ್ರವಾಸ ಹೋಗಿದ್ದ ವೇಳೆ ಇಸ್ರೇಲ್ ಕೃಷಿ ಪದ್ಧತಿ ಕಂಡು ಅಶೋಕ ಪಾಟೀಲರು ಮಾರುಹೋಗಿದ್ರು. ಈ ಆಧುನಿಕ ರೈತನಿಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್ ನೀಡಿದೆ. ಈ ಮೂಲಕ ಅಶೋಕ ಪಾಟೀಲರು ಎಲ್ಲರಿಗೂ ಮಾದರಿಯಾಗಿದ್ದಾರೆ.
Advertisement
https://www.youtube.com/watch?v=a-MNinOA_QM