ಲಂಡನ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 113 ವರ್ಷಗಳ ಹಿಂದಿನ ಕೆಟ್ಟ ದಾಖಲೆಯನ್ನು ಇತ್ತಂಡಗಳ ಆರಂಭಿಕ ಆಟಗಾರರು ಮುರಿದಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ನಡೆದ ಈ ಸಾಲಿನ ಆ್ಯಶಸ್ ಟೂರ್ನಿ 2-2 ಅಂತರದಲ್ಲಿ ಟೈನೊಂದಿಗೆ ಅಂತ್ಯವಾಗಿದೆ. ಆದರೆ ಟೂರ್ನಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು ಮಾತ್ರ ತೀವ್ರ ನಿರಾಸೆ ಮೂಡಿಸಿದ್ದು, 12.55ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಭಾನುವಾರ ಅಂತ್ಯವಾದ ಅಂತಿಮ ಟೆಸ್ಟ್ ನ 5ನೇ ದಿನದಾಟದಲ್ಲಿ ಆಸೀಸ್ ತಂಡದ ಡೇವಿಡ್ ವಾರ್ನರ್ 11 ರನ್ ಹಾಗೂ ಹ್ಯಾರಿಸ್ 09 ರನ್ ಗಳಿಸಿ ಔಟಾಗಿದ್ದರು. ಪರಿಣಾಮ ಐದು, ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು ಗಳಿಸಿದ ಸರಾಸರಿ ಕಡಿಮೆ ರನ್ ಗಳಸಿದ ಕೆಟ್ಟ ದಾಖಲೆಗೆ ಕಾರಣರಾಗಿದ್ದಾರೆ.
Advertisement
Series drawn 2️⃣- 2️⃣
The #Ashes will return to Australia! pic.twitter.com/gBGBGCJCpM
— ICC (@ICC) September 15, 2019
Advertisement
ಈ ಹಿಂದೆ 1906 ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು 14.16 ಸರಾಸರಿಯಲ್ಲಿ ರನ್ ಗಳಿಸಿದ್ದರು. ಸದ್ಯ ಆಸೀಸ್ ಹಾಗೂ ಇಂಗ್ಲೆಂಡ್ ಆರಂಭಿಕ ಆಟಗಾರರು ಇದಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
Advertisement
ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 329 ರನ್ ಗಳಿಗೆ ಆಲೌಟ್ ಆಗಿ ಆಸೀಸ್‍ಗೆ 399 ರನ್‍ಗಳ ಗುರಿ ನೀಡಿತ್ತು. ಪರಿಣಾಮ 2001ರ ಬಳಿಕ ಆಸೀಸ್ ವಿದೇಶಿ ನೆಲದಲ್ಲಿ ಆ್ಯಶಸ್ ಟೂರ್ನಿ ಗೆಲುವಿಗೆ 399 ರನ್ ಗಳಿಸಬೇಕಿತ್ತು. ಆದರೆ ಆಸೀಸ್ ಆಟಗಾರರು 2ನೇ ಇನ್ನಿಂಗ್ ನಲ್ಲಿ 263 ರನ್ ಗಳಿಗೆ ಆಲೌಟ್ ಆದ ಹಿನ್ನೆಲೆಯಲ್ಲಿ ಇಂಗ್ಲೆಂಡ್ 135 ರನ್ ಗಳ ಜಯ ಪಡೆಯಿತು. ಇದರೊಂದಿಗೆ ಆಸೀಸ್ ಸರಣಿ 2-2 ಅಂತರದಲ್ಲಿ ಸಮಬಲದೊಂದೊಗೆ ಅಂತ್ಯವಾಯಿತು. 47 ವರ್ಷಗಳ ಬಳಿಕ ಆ್ಯಶಸ್ ಸರಣಿ ಡ್ರಾದೊಂದಿಗೆ ಅಂತ್ಯಗೊಂಡಿತು. ಈ ಹಿಂದೆ 1972 ರಲ್ಲಿ ಆ್ಯಶಸ್ ಸರಣಿ ಡ್ರಾಗೊಂಡಿತ್ತು.
Advertisement
David Warner finishes the Ashes with a lower average than Jack Leach. pic.twitter.com/UfRSsjbDTc
— Cricket District (@cricketdistrict) September 15, 2019