ಚಿಕ್ಕೋಡಿ: ಆಧುನಿಕ ಯುಗದಲ್ಲಿ ಇಂದು ಹರಿಕಥೆ, ನಾಟಕ, ಭಜನೆ ಮುಂತಾದ ದೇಸಿ ಕಲೆ ನಶಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ನಿರ್ವಹಿಸಬೇಕಿದೆ ಇಂತಹ ಭಾರತೀಯರ ಜೀವನದ ಪರಂಪರೆಯಲ್ಲಿ ಕಲೆಯು ಹಾಸು ಹೊಕ್ಕಾಗಿದ್ದು ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ ಎಂದು ಸಾಹಿತಿ ಆಶಾ ಯಮಕನಮರಡಿ ಹೇಳಿದರು.
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಗಡಿನಾಡು ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಯುವ ಜನತೆ ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗಿ ದೇಸಿಯ ಪರಂಪರೆ ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ದೇಸಿಯ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಪಸರಿಸುವ ಕಾರ್ಯವನ್ನು ಇಂದಿನ ಯುವ ಪೀಳಿಗೆ ಮಾಡಬೇಕಾಗಿದೆ ಎಂದರು.
Advertisement
Advertisement
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿ ಅಕಬರ ಸನದಿ ಅವರು ಈ ಕುರಿತು ಮಾತನಾಡಿದ್ದು, ಕಲೆ, ಸಾಹಿತ್ಯವನ್ನು ಉಳಿಸುವ ಜವಾಬ್ದಾರಿಯು ಮಹಿಳೆಯರ ಮೇಲೆ ಹೆಚ್ಚಿದೆ. ತಮ್ಮ ಮಕ್ಕಳಿಗೆ ಈ ನಾಡಿನ ಕಲೆ, ಸಂಸ್ಕøತಿಯನ್ನು ಚಿಕ್ಕಂದಿನಿರುವಾಗಲೇ ತಿಳಿ ಹೇಳಬೇಕು. ಇದರಿಂದ ಅವರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುವಲ್ಲಿ ಸಹಾಯವಾಗುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಬಿಜೆಪಿಯವರ ಕೈಕಾಲು ಹಿಡಿದು ಚುನಾವಣೆಯಲ್ಲಿ ನಿಲ್ಲಿಸಿಕೊಂಡಿದ್ದಾರೆ: ಈಶ್ವರಪ್ಪ
Advertisement
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕಿ ಹಮೀದಾಬೇಗಂ ದೇಸಾಯಿ ಅವರು ಮಾತನಾಡಿದ್ದು, ಗಡಿಭಾಗದಲ್ಲಿ ಕಳೆದ 13 ವರ್ಷಗಳಿಂದ ಸಂಕೇಶ್ವರದ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘವು ನಿರಂತರವಾಗಿ ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ನೂರಾರು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವರಲ್ಲಿ ಹುದುಗಿದ್ದ ಸೂಪ್ತ ಪ್ರತಿಭೆಯು ಹೊರ ಬರಲು ಕಾರಣವಾಗಿದೆ ಎಂದು ತಿಳಿಸಿದರು.
Advertisement
ಈ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಕಲ್ಲಪ್ಪಾ ಸೊಡ್ಡನ್ನವರ ತಂಡದಿಂದ ಹರಿ ಭಜನೆ, ಕಾಡೇಶ್ ನಿಲಜಗಿ ಅವರಿಂದ ಭಾವಗೀತೆ, ವೈಷ್ಣವಿ ಅವರಿಂದ ನೃತ್ಯಗಳು ಜರುಗಿ ಜನರ ಮನ ರಂಜಿಸಿದವು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ