ಚಂದನವನದ ನಟಿ ಆಶಾ ಭಟ್ ತಮ್ಮ ಫಸ್ಟ್ ಕವರ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಈ ಕವರ್ ಸಾಂಗ್‍ಗೆ ಅವರು ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾಗಿದ್ದಾರೆ.
ರಾಬರ್ಟ್ ಖ್ಯಾತಿಯ ಸಿಂಪಲ್ ಹುಡುಗಿ ಆಶಾ ಯಾವಾಗಲೂ ಸಾಂಪ್ರದಾಯಿಕ ಉಡುಗೆ, ಆಟ ಮತ್ತು ಅಡುಗೆ ಮಾಡುವ ಮೂಲಕ ಸುದ್ದಿಯಾಗುತ್ತಿದ್ದರು, ಆದರೆ ಈಗ ಕನ್ನಡ ದಶಕದ ಸೂಪರ್ ಹಿಟ್ ಸಾಂಗ್ ಮತ್ತು ಸೂಪರ್ ಹಿಟ್ ಸಿನಿಮಾವನ್ನು ಕನ್ನಡಿಗರಿಗೆ ನೆನಪಿಸಿದ್ದಾರೆ. ತಮ್ಮ ಕವರ್ ಸಾಂಗ್ ಝಲಕ್ ನನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಅವರು, ಕನ್ನಡದ ಎವರ್‌ಗ್ರೀನ್ ಮೂವೀ ‘ಅಮೃತವರ್ಷಿಣಿ’ ಸಿನಿಮಾದ ‘ತುಂತುರು ಅಲ್ಲಿ ನೀರ ಹಾಡು’ ಸಾಂಗ್‍ನನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?
View this post on Instagram
ಆಶಾ ಕನ್ನಡದಲ್ಲಿ ಮಾಡಿರುವುದು ಒಂದೇ ಸಿನಿಮಾವಾದರೂ ತಮ್ಮ ಸೃಜನಶಿಲತೆ ಮತ್ತು ಆಚಾರದಿಂದ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ತಮ್ಮ ಕವರ್ ಸಾಂಗ್ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕೊನೆಗೂ ನನ್ನ ಮೊದಲ ಕವರ್ ಸಾಂಗ್ ಬಿಡುಗಡೆಯಾಗಿದೆ. ನೀವು ನನ್ನ ಪೂರ್ತಿ ಸಾಂಗ್ ಕೇಳಿಸಿಕೊಳ್ಳಬೇಕು ಎಂದರೆ ನನ್ನ ಇನ್‍ಸ್ಟಾ ಬಯೋದಲ್ಲಿ ಲಿಂಕ್ ಹಾಕಿದ್ದೇನೆ. ವೀಡಿಯೋವನ್ನು ವೀಕ್ಷಿಸಿ, ಪ್ರತಿಕ್ರಿಯಿಸಿ. ಈ ವೀಡಿಯೋ ಮಾಡಲು ಸಹಾಯ ಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಆಶಾ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಹಾಡನ್ನು ಹಾಡುವುದರ ಜೊತೆಗೆ ಭಾವನೆಯನ್ನು ಸಖತ್ ಆಗಿ ಎಕ್ಸ್‍ಪ್ರೆಸ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪ್ರಕೃತಿ ಜೊತೆ ನಟಿಯನ್ನು ಸುಂದರವಾಗಿ ಕ್ಯಾಪ್ಚರ್ ಮಾಡಲಾಗಿದೆ. ಸುಂದರ ಜಾಗದಲ್ಲಿ ಆಶಾ ಇನ್ನೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದದಲ್ಲಿ ಆ್ಯಕ್ಟವ್ ಇರುವ ಈ ನಟಿ ತಮ್ಮ ಎಲ್ಲ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಆಶಾ ಹಸಿರು ಕ್ರಾಂತಿಯ ಸೂಪರ್ ಹೀರೋಗಳು ಮತ್ತು ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರ ಜೊತೆಗೆ ಕೆಲವು ಕ್ಷಣ ಕಳೆದಿದ್ದರು. ಈ ಕುರಿತು ಸಹ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಟ್ರೋಲ್‌ಗೆ ಆಹಾರವಾದ ಬಾಲಿವುಡ್ ನಟಿ ಕರೀನಾ ಆ ಎರಡು ಪೀಸ್ ಬಟ್ಟೆ
2014ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಅವಾರ್ಡ್ ಗೆದ್ದ ಈ ನಟಿ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲಿಯು ನಟಿಸಿದ್ದು, ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಬಗ್ಗೆ ಫೋಷಣೆಯನ್ನು ಮಾಡಿಲ್ಲ.