ನವದೆಹಲಿ: ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಅಗತ್ಯವಿಲ್ಲ ಎಂದು ಕಾನೂನು ಆಯೋಗವು ಅಭಿಪ್ರಾಯಪಟ್ಟಿದೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಾದ್ಯಂತ ಏಕರೂಪದ ನಾಗರಿಕ ಸಂಹಿತೆಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು ಬೆಂಬಲಿಸುತ್ತಿದ್ದಾರೆ. ಆದರೆ ಏಕರೂಪ ಸಂಹಿತೆ ದೇಶದಲ್ಲಿ ಅಗತ್ಯವಿಲ್ಲ ಎಂದರು.
Advertisement
Advertisement
ಗೋವಾದ ಸಿವಿಲ್ ಕೋಡ್ ಪ್ರಕಾರ ಪತ್ನಿ 30 ವರ್ಷ ವಯಸ್ಸಿನೊಳಗೆ ಗಂಡು ಮಗುವನ್ನು ಹೆರಲು ವಿಫಲವಾದರೆ, ಹಿಂದೂ ಪುರುಷರಿಗೆ ಎರಡನೇ ಮದುವೆ ಆಗುವ ಹಕ್ಕಿದೆ. ಆ ರಾಜ್ಯದಲ್ಲೂ ಬಿಜೆಪಿಯಿದೆ. ಆದರೂ ಅವರು ಈ ವಿಷಯದಲ್ಲಿ ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ನಿರುದ್ಯೋಗ ಸಮಸ್ಯೆ ಹೆಚ್ಚಳ, ಆರ್ಥಿಕತೆ ವಿಫಲ, ವಿದ್ಯುತ್ ಕಲ್ಲಿದ್ದಲು ಬಿಕ್ಕಟ್ಟು ಇವೆಲ್ಲವನ್ನು ಪರಿಹರಿಸುವುದನ್ನು ಬಿಟ್ಟು ಬಿಜೆಪಿ ನಾಯಕರು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜಕಾರಣ ಬ್ಯುಸಿನೆಸ್ ಅಲ್ಲ, ಅಪ್ಪ ಮಕ್ಕಳ ಸಂಸ್ಕೃತಿ ರಾಜಕಾರಣದಲ್ಲಿ ಇರಬಾರದು: ಅಶ್ವಥ್ ನಾರಾಯಣ
ಇದಕ್ಕೂ ಮೊದಲು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ತಮ್ಮ ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಪರಿಶೀಲಿಸುತ್ತಿವೆ ಎಂದು ಹೇಳಿದ್ದರು. ಇದನ್ನೂ ಓದಿ: ಬೊಮ್ಮಾಯಿಯನ್ನು ಬದಲಾಯಿಸಲು RSS ಹೊರಟಿದೆ: ಸಿದ್ದು