ಬೆಂಗಳೂರು: ಕಳೆದ ಒಂದು ದಶಕದ ಹಿಂದೆ ಅಂಡರ್ 19 ವಿಶ್ವಕಪ್ ಗೆದ್ದ ತಂಡದ ನಾಯಕರಾಗಿ ಮಿಂಚಿದ್ದ ವಿರಾಟ್ ಕೊಹ್ಲಿ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಶ್ವದ ಹಲವು ಕ್ರೀಡಾಗಣ್ಯರು ಕೊಹ್ಲಿಗೆ ಶುಭಾಶಯ ತಿಳಿಸಿ ಸಂದೇಶ ರವಾನಿಸಿದ್ದಾರೆ.
ವಿಶ್ವ ಕ್ರಿಕೆಟ್‍ಗೆ ಕಾಲಿಡುತ್ತಿದಂತೆ ತಮ್ಮ ಅಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಹಲವು ದಾಖಲೆಗಳನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಕ್ರಿಕೆಟ್‍ನ ಎಲ್ಲಾ ಮಾದರಿಗಳಲ್ಲಿಯೂ ಯಶಸ್ವಿ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹಲವರು ಹಾರೈಸಿದ್ದಾರೆ. ಇತ್ತ ಪತಿಯೊಂದಿಗೆ ಹುಟ್ಟುಹಬ್ಬ ಆಚರಿಕೊಂಡಿರುವ ಅನುಷ್ಕಾ ಶರ್ಮಾ ದೇವರಿಗೆ ಧನ್ಯವಾದ ತಿಳಿಸಿದ್ದಾರೆ.
Advertisement
Wishing you a lot of success and happiness in the year ahead. Happy Birthday, @imvkohli! pic.twitter.com/HcXX88rXJn
— Sachin Tendulkar (@sachin_rt) November 5, 2018
Advertisement
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಬ್ಯಾಟ್ಸ್ ಮನ್ ಆಗಿ ಹಲವು ದಾಖಲೆ ನಿರ್ಮಿಸಿದಲ್ಲದೇ ಮುಂದಿನ ಅವಧಿಯಲ್ಲಿ ತಂಡದ ನಾಯಕತ್ವ ವಹಿಸಿ ಹಲವು ಸಂದರ್ಭದಲ್ಲಿ ಯಶಸ್ವಿಯಾಗಿ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರು. ಅಲ್ಲದೇ ಐಪಿಎಲ್ ನಲ್ಲಿ ರಾಯಲ್ಸ್ ಚಾಲೆಂಜರ್ಸ್ ನಾಯಕತ್ವ ವಹಿಸಿದ್ದರು.
Advertisement
0 ಬಾಲ್‍ಗೆ ವಿಕೆಟ್ ಪಡೆದ ಕೊಹ್ಲಿ: 2011 ರಲ್ಲಿ ಮಹೇಂದ್ರ ಸಿಂಗ್ ನೇತೃತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಕೊಹ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಮೊದಲ ಎಸೆತವನ್ನೇ ವೈಡ್ ಎಸೆದ ಕೊಹ್ಲಿ, ಧೋನಿ ಅವರ ಸ್ಟಂಪಿಂಗ್ ನೆರವಿನಿಂದ ವಿಕೆಟ್ ಪಡೆದರು. ಇದರೊಂದಿಗೆ ವಿಶ್ವ ಕ್ರಿಕೆಟ್ ನಲ್ಲಿ 0 ಎಸೆತಕ್ಕೆ ವಿಕೆಟ್ ಪಡೆದ ಬೌಲರ್ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
Advertisement
Wishes galore for the Indian captain from the team as he celebrates his 30th Birthday. Here's to many more match-winning moments and ???????? in the cabinet.
Full video here – https://t.co/MCnjtfoIuD pic.twitter.com/Yr83r8LPyS
— BCCI (@BCCI) November 5, 2018
ತಂದೆಯ ಸಾವಿನ ಸುದ್ದಿ ಬಳಿಕವೂ ಬ್ಯಾಟಿಂಗ್: ಕೊಹ್ಲಿ ಅವರ ಕರ್ತವ್ಯ ನಿಷ್ಠೆಗೆ ಅವರ ತಂದೆಯ ಸಾವಿನ ದಿನವೂ ಕೊಹ್ಲಿ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ್ದು ಸಾಕ್ಷಿಯಾಗಿದೆ. ಕೇವಲ 18 ವರ್ಷ ವಯಸ್ಸಿನವರಾಗಿದ್ದ ಕೊಹ್ಲಿ 2006 ಡಿಸೆಂಬರ್ ನಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ಅಂದು ಕರ್ನಾಟಕದ ವಿರುದ್ಧ ಪಂದ್ಯದವಾಡುತ್ತಿದ್ದ ದೆಹಲಿ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದರು. ಕೊಹ್ಲಿಗೆ ತಂದೆಯ ಸಾವಿನ ಸುದ್ದಿ ರಾತ್ರಿಯೇ ತಿಳಿದಿದ್ದರೂ ಮರುದಿನ ಕ್ರೀಡಾಂಗಣಕ್ಕೆ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಪಂದ್ಯದಲ್ಲಿ ತಂಡಕ್ಕೆ ಮಹತ್ವದ 90 ರನ್ ಕಾಣಿಕೆ ನೀಡಿದ್ದ ಕೊಹ್ಲಿ ಅಂಪೈರ್ ನೀಡಿದ್ದ ಕೆಟ್ಟ ತೀರ್ಪಿಗೆ ಔಟಾಗಿ ಪೆವಿಲಿಯನ್ ಸೇರಿದ್ದರು.
ಕೆಲ ದಿನಗಳ ಹಿಂದೆ ತಮ್ಮ ಕ್ರಿಕಟ್ ವೃತ್ತಿ ಜೀವನ ಬಗ್ಗೆ ಮಾತನಾಡಿದ್ದ ಕೊಹ್ಲಿ, ತನಗೆ ಇನ್ನು ಕೆಲ ವರ್ಷಗಳು ಮಾತ್ರ ಕ್ರಿಕೆಟ್ ಆಡಲು ಅವಕಾಶವಿದೆ. ಅದ್ದರಿಂದ ತಾನು ಮುಂದಿನ ಅವಧಿಯಲ್ಲಿ ಸಂಪೂರ್ಣವಾಗಿ ಕ್ರಿಕೆಟ್‍ನಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದರು. ಈ ಹೇಳಿಕೆ ಕ್ರಿಕೆಟ್ ಬಗ್ಗೆ ಕೊಹ್ಲಿ ಹೊಂದಿರುವ ಪ್ರೀತಿಗೆ ಮತ್ತೊಮ್ಮೆ ಸಾಕ್ಷಿಯಾಗಿತ್ತು. ವೃತ್ತಿಜೀವನದಲ್ಲಿ ವೈಫಲ್ಯ ಕಂಡಿದ್ದ ಸಮಯದಲ್ಲಿ ಹಲವು ಟೀಕೆಗಳನ್ನು ಎದುರಿಸಿದ ಸಂದರ್ಭದಲ್ಲೂ ಕೊಹ್ಲಿ ಬ್ಯಾಟ್ ಮೂಲಕವೇ ಎಲ್ಲರಿಗೂ ಉತ್ತರ ನೀಡಿದ್ದರು. ಸದ್ಯ ವಿಂಡೀಸ್ ವಿರುದ್ಧ ಟಿ20 ಟೂರ್ನಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, 2019 ರ ವಿಶ್ವಕಪ್ ಟೂರ್ನಿಗೆ ಉತ್ತಮ ತಂಡವನ್ನು ಕೊಂಡ್ಯೊಯುವತ್ತ ಗಮನ ಕೇಂದ್ರಿಕರಿಸಿದ್ದಾರೆ.
India's charismatic leader.
The fastest man to 10,000 ODI runs.
The fastest man to 2,000 T20I runs.
Without a doubt one of the finest batsmen today in all three formats.
Happy 30th birthday to the brilliant @imvKohli! pic.twitter.com/V2kcQBBNCY
— ICC (@ICC) November 5, 2018
ಕೊಹ್ಲಿ 2018 ರ ವರ್ಷದ ಸಾಧನೆ: 205 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಪೂರೈಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ ಭಾರತದ 13 ಆಟಗಾರ ಎನಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧ ಹ್ಯಾಟ್ರಿಕ್ ಶತಕ ಗಳಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದರು. 2011 ರಿಂದ 2018 ವರ ಅವಧಿಯಲ್ಲಿ ಪ್ರತಿ ವರ್ಷ 1 ಸಾವಿರ ರನ್ ಪೂರೈಸಿದ್ದಾರೆ. ಈ ವರ್ಷ ಕೇವಲ 11 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಪೂರೈಸುವ ಮೂಲಕ ವರ್ಷವೊಂದರಲ್ಲಿ ವೇಗವಾಗಿ ಸಾವಿರ ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ಆಟಗಾರ ಹಶಿಮ್ ಅಮ್ಲ 15 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಇತ್ತ ಟಿ20 ಕ್ರಿಕೆಟ್‍ನಲ್ಲೂ ವೇಗದವಾಗಿ 2 ಸಾವಿರ ಪೂರೈಸಿದ್ದಾರೆ.
ವಿಶ್ವ ಕ್ರೀಡಾ ಜಗತ್ತಿನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ, ಯುವ ಸಮುದಾಯಕ್ಕೆ ಫಿಟ್‍ನೆಸ್ ಕುರಿತು ಸಲಹೆ ನೀಡಿ ಪ್ರೇರಣೆಯಾಗಿದ್ದಾರೆ. ಕೊಹ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಆಸೀಸ್ ಟೂರ್ನಿಗೆ ಮತ್ತೆ ತಂಡವನ್ನು ಸೇರಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Thank God for his birth ????????❤✨ pic.twitter.com/SzeodVBzum
— Anushka Sharma (@AnushkaSharma) November 5, 2018