ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಷಣದ ವೇಳೆ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೀಸಲಿರಿಸಿದ್ದ ಕುರ್ಚಿ ಖಾಲಿಯಾಗಿಯೇ ಇತ್ತು. ಅವರು ಕಾರ್ಯಕ್ರಮದಿಂದ ದೂರ ಉಳಿದಿದ್ದು, ಈ ಬಗ್ಗೆ ಆಡಿಯೋ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ತಮ್ಮ ಭಾಷಣದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತಿಯೊಬ್ಬ ಪ್ರಧಾನಿ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಇಂದು ಕೆಲವರು ಭಾರತವು ಕಳೆದ ಕೆಲವು ವರ್ಷಗಳಲ್ಲಿ ಮಾತ್ರ ಅಭಿವೃದ್ಧಿಯನ್ನು ಕಂಡಿದೆ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಪ್ರತಿಯೊಬ್ಬ ಪ್ರಧಾನಿಯೂ ರಾಷ್ಟ್ರದ ಬಗ್ಗೆ ಯೋಚಿಸಿದ್ದರು. ಇಂದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸ್ವಾಯತ್ತ ಸಂಸ್ಥೆಗಳು ಗಂಭೀರ ಅಪಾಯದಲ್ಲಿದೆ ಎಂದು ನಾನು ನೋವಿನಿಂದ ಹೇಳುತ್ತೇನೆ. ಧ್ವನಿಯನ್ನು ಹತ್ತಿಕ್ಕಲು ಹೊಸ ಹೊಸ ಮಾರ್ಗಗಳನ್ನು ಬಳಸಲಾಗುತ್ತಿದೆ. ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ದಾಳಿಗಳು ಮಾತ್ರವಲ್ಲದೆ, ಚುನಾವಣಾ ಆಯೋಗವನ್ನೂ ದುರ್ಬಲಗೊಳಿಸಲಾಗುತ್ತಿದೆ. ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗುತ್ತಿದೆ. ಮೈಕ್‍ಗಳನ್ನು ಮ್ಯೂಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮನೆ ಬಾಲ್ಕನಿಯಲ್ಲಿ ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸಿದ ಹೆಚ್‌ಡಿಡಿ
Advertisement
Advertisement
ಮಹಾನ್ ನಾಯಕರು ಹೊಸ ಇತಿಹಾಸವನ್ನು ರಚಿಸಲು ಹಿಂದಿನ ಇತಿಹಾಸವನ್ನು ಅಳಿಸುವುದಿಲ್ಲ. ಆದರೆ ಇಂದು ಎಲ್ಲವನ್ನೂ ಮರುಹೆಸರಿಸಲು ಪ್ರಯತ್ನ ನಡೆಯುತ್ತಿದೆ. ಅವರು ಹಿಂದಿನ ಯೋಜನೆಗಳು, ಮೂಲಸೌಕರ್ಯ ಯೋಜನೆಗಳನ್ನು ಮರುನಾಮಕರಣ ಮಾಡಿದ್ದಾರೆ. ಸರ್ವಾಧಿಕಾರದ ಮಾರ್ಗಗಳಿಂದ ಪ್ರಜಾಪ್ರಭುತ್ವವನ್ನು ಕಿತ್ತುಹಾಕಲಾಗುತ್ತಿದೆ. ಈಗ ಹಳೆಯ ಕಾನೂನುಗಳನ್ನು ಮರುನಾಮಕರಣ ಮಾಡುತ್ತಿದ್ದಾರೆ. ಮೊದಲು ಅಚ್ಛೇ ದಿನ್ ಎಂದರು, ನಂತರ ನವ ಭಾರತ, ಈಗ ಅಮೃತ್ ಕಾಲ ಎನ್ನುತ್ತಿದ್ದಾರೆ. ಅವರು ತಮ್ಮ ವೈಫಲ್ಯಗಳನ್ನು ಮರೆಮಾಡಲು ಹೆಸರುಗಳನ್ನು ಬದಲಾಯಿಸುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
Advertisement
Advertisement
ಅಲ್ಲದೇ, ಕಣ್ಣಿನ ಸಮಸ್ಯೆ ಇರುವ ಕಾರಣ ಕೆಂಪುಕೋಟೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಈ ವೇಳೆ ದೇಶಕ್ಕಾಗಿ ಶ್ರಮಿಸಿದ ನಾಯಕರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಸ್ವಾತಂತ್ರ್ಯದ ದಿನ ಕಾಂಗ್ರೆಸ್‍ನ ಅಧ್ಯಕ್ಷರು ಯಾವುದೇ ಟೀಕೆಗೆ ಮಹತ್ವ ನೀಡುವುದಿಲ್ಲ. ಆದರೆ ಹಲವು ದಶಕಗಳ ನಂತರ ಇದೇ ಮೊದಲ ಬಾರಿಗೆ ಸರ್ಕಾರವನ್ನು ಟೀಕಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಇದನ್ನೂ ಓದಿ: ನೀರಿನ ಆಳದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ
Web Stories