ಬಾಲಿವುಡ್ ಅಂದಾಕ್ಷಣ ತಕ್ಷಣ ನೆನಪಾಗುವ ಹೆಸರು ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್. ಇವರನ್ನು ಬಾಲಿವುಡ್ ಬಾಕ್ಸ್ ಆಫೀಸ್ ಅಂತಾನೇ ಕರೆಯುತ್ತಾರೆ. ಶಾರುಖ್ ಖಾನ್ ಅವರನ್ನು ಬಾಲಿವುಡ್ ಬಾದ್ ಶಾ ಎಂದು ಕರೆದರೆ, ಸಲ್ಮಾನ್ ಖಾನ್ ಅವರನ್ನು ಕಿಂಗ್ಸ್ ಎಂದು ಅಭಿಮಾನದಿಂದ ಕೊಂಡಾಡುತ್ತಾರೆ. ಸುಲ್ತಾನ್, ಕಿಂಗ್, ಬಾದ್ ಶಾ ಈ ರೀತಿಯಲ್ಲಿ ಅಭಿಮಾನಿಗಳು ಅಭಿಮಾನದಿಂದ ಈ ಮೂವರು ನಟರನ್ನು ಕರೆಯುತ್ತಾರೆ. ಇವರಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟಾಂಗ್ ಕೊಟ್ಟಿದ್ದಾರೆ.
Advertisement
ಮಾಧ್ಯಮವೊಂದರ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಾಲಿವುಡ್ ನಲ್ಲಿ ಸುಲ್ತಾನ್, ಕಿಂಗ್, ಬಾದ್ ಶಾ ಸಂಸ್ಕೃತಿ ಇರುವತನಕ ಈ ಸಿನಿಮಾ ರಂಗ ಮುಳುಗುತ್ತಲೇ ಇರುತ್ತದೆ ಎಂದು ಚಾಟಿ ಬೀಸಿದ್ದಾರೆ. ನೇರವಾಗಿ ಖಾನ್ ಗಳ ಹೆಸರು ಹೇಳದೇ ಇದ್ದರೂ, ಅವರನ್ನು ಕರೆಯುವ ಹೆಸರಿನಿಂದಲೇ ಕಾಲೆಳೆದಿದ್ದಾರೆ. ಮೂವರು ಇರುವತನಕ ಬಾಲಿವುಡ್ ಉದ್ಧಾರವಾಗಲ್ಲ ಎನ್ನುವ ಅರ್ಥದಲ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
Advertisement
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ಆದಾಗ, ಬಾಲಿವುಡ್ ಸ್ಟಾರ್ ನಟರು ಆ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ ಎನ್ನುವ ಕೋಪ ಅವರಲ್ಲಿದೆ. ಕಂಗನಾ ರಣಾವತ್ ಹೊರತುಪಡಿಸಿ ಯಾರೂ ಮೊದ ಮೊದಲು ಧ್ವನಿ ಎತ್ತಲಿಲ್ಲ. ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಸಿನಿಮಾಗಳ ಬಗ್ಗೆ ಒಬ್ಬೊಬ್ಬರಾಗಿ ಮಾತನಾಡಲು ಶುರು ಮಾಡಿದರು. ಹೀಗಾಗಿ ಆ ಕೋಪದಲ್ಲೇ ವಿವೇಕ್ ಅಗ್ನಿಹೋತ್ರಿ ಖಾನ್ ಗಳ ಕುರಿತು ಈ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.