ನವದೆಹಲಿ: ದಿನೇ ದಿನೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಇಂತಹ ಸನ್ನಿವೇಶದಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ನಿವಾಸದಿಂದ ಸಂಸತ್‌ಗೆ ಹಸಿರು ಹೈಡ್ರೋಜನ್ ಚಾಲಿತ ಕಾರಿನಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ.
ಕಾರು ಪೂರ್ಣ ಟ್ಯಾಂಕ್‌ನಲ್ಲಿ 600 ಕಿ.ಮೀ. ಕ್ರಮಿಸಬಹುದೆಂದು ವರದಿಯಾಗಿದೆ. ಇದು ಪ್ರತಿ ಕಿ.ಮೀ.ಗೆ ಕೇವಲ 2 ರೂ. ಪ್ರಯಾಣದ ವೆಚ್ಚವನ್ನು ತರುತ್ತದೆ. ವಾಹನದ ಇಂಧನ ಟ್ಯಾಂಕ್ ತುಂಬಲು ಇದು ಕೇವಲ ಐದು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನೂ ಓದಿ: 8ನೇ ಬಾರಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ
Advertisement
Advertisement
ಸಚಿವರು ಕಾರಿನ ಮುಂಭಾಗದ ಸೀಟಿನಲ್ಲಿ ಚಾಲಕನ ಪಕ್ಕದಲ್ಲಿ ಕುಳಿತು ಪಾರ್ಲಿಮೆಂಟ್‌ಗೆ ಆಗಮಿಸಿದರು. ಬಿಳಿ ಬಣ್ಣದ ಕಾರು ಹಸಿರು ನಂಬರ್ ಪ್ಲೇಟ್ ಅನ್ನು ಹೊಂದಿದ್ದು, ಇದನ್ನು ಇಲೆಕ್ಟ್ರಿಕ್ ವಾಹನಗಳಲ್ಲಿಯೂ ಬಳಸಲಾಗುತ್ತದೆ.
Advertisement
Union Minister Shri @nitin_gadkari ji visited Parliament House by Hydrogen based Fuel Cell Electric Vehicle (FCEV) today. Demonstrating the car powered by ‘Green Hydrogen’, Shri Gadkari ji emphasised the need to spread awareness about Hydrogen, FCEV technology… pic.twitter.com/NNHewczvpc
— Office Of Nitin Gadkari (@OfficeOfNG) March 30, 2022
Advertisement
ನಿತಿನ್ ಗಡ್ಕರಿ ಅವರು ಈಚೆಗಷ್ಟೇ ಭಾರತದ ಮೊದಲ ಹಸಿರು ಹೈಡ್ರೋಜನ್ ಆಧಾರಿತ ಸುಧಾರಿತ ಇಂಧನ ಕೋಶದ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ‘ಟೊಯೊಟಾ ಮಿರೈ’ ಅನ್ನು ಬಿಡುಗಡೆ ಮಾಡಿದ್ದರು. ಇದು ಭಾರತದಲ್ಲಿನ ಮೊದಲ ಯೋಜನೆಯಾಗಿದೆ ಎಂದು ಅವರು ಹೇಳಿದ್ದರು. ಇದನ್ನೂ ಓದಿ: ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!
… and its benefits to support hydrogen-based society for India.
Shri Gadkari assured that Green Hydrogen will be manufactured in India, Green Hydrogen refuelling stations will be established generating sustainable employment opportunities in the country. pic.twitter.com/6SQR52MHjc
— Office Of Nitin Gadkari (@OfficeOfNG) March 30, 2022
ತಾವೇ ಹೈಡ್ರೋಜನ್ ಚಾಲಿತ ಕಾರನ್ನು ಬಳಸುವುದಾಗಿ ಸಚಿವರು ಜನವರಿಯಲ್ಲಿ ಘೋಷಿಸಿದ್ದರು. ಜಪಾನ್‌ನ ಟೊಯೊಟಾ ಕಂಪನಿಯು ಹಸಿರು ಹೈಡ್ರೋಜನ್‌ನಿಂದ ಚಲಿಸುವ ವಾಹನವನ್ನು ನನಗೆ ನೀಡಿದೆ. ನಾನು ಅದನ್ನು ಪೈಲಟ್ ಯೋಜನೆಯಾಗಿ (ಪರ್ಯಾಯ ಇಂಧನದಲ್ಲಿ) ಬಳಸುತ್ತೇನೆ ಎಂದು ಅವರು ಹೇಳಿದ್ದರು.
ಕಳೆದ ಒಂಬತ್ತು ದಿನಗಳಲ್ಲಿ ಎಂಟನೇ ಬಾರಿಗೆ ಬುಧವಾರವು ಸಹ ಇಂಧನ ಬೆಲೆಯನ್ನು ಮತ್ತೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕ್ರಮವಾಗಿ ಲೀಟರ್‌ಗೆ 80 ಪೈಸೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ
India will soon become Green Hydrogen exporting country.
In line with PM Shri @narendramodi ji’s vision of clean and cutting-edge mobility in India, our government, through ‘National Hydrogen Mission’ is committed to focus on green and clean energy. pic.twitter.com/FOQ9pHznfh
— Office Of Nitin Gadkari (@OfficeOfNG) March 30, 2022
ರಾಷ್ಟ್ರ ರಾಜಧಾನಿಯಲ್ಲಿ ಒಂದು ಲೀಟರ್ ಪೆಟ್ರೋಲ್ 100.21 ರೂ. ಇದ್ದದ್ದು ಈಗ 101.01 ರೂ. ಆಗಿದೆ. ಡೀಸೆಲ್ ಬೆಲೆ ಲೀಟರ್‌ಗೆ 91.47 ಇದ್ದದ್ದು ಈಗ 92.27 ಕ್ಕೆ ಏರಿಕೆಯಾಗಿದೆ.