ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಶೋಯೆಬ್ ಅಕ್ತರ್

Public TV
2 Min Read
virat kohali

ಮುಂಬೈ: ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ದೈತ್ಯ ಬೌಲರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VIRAT KOHLI 2

ವಿರಾಟ್ ಕೊಹ್ಲಿ ಭಾರತ ತಂಡದ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡವರು. ಆದರೆ ಅವರ ಬ್ಯಾಟ್‍ನಿಂದ ಇತ್ತೀಚಿಗೆ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ನವೆಂಬರ್ 2019 ರಿಂದ ಅವರು ಯಾವುದೇ ಅಂತರಾಷ್ಟ್ರೀಯ ಮ್ಯಾಚ್‍ಗಳಲ್ಲಿಯೂ ಶತಕವನ್ನು ಗಳಿಸಿಲ್ಲ. ಐಪಿಎಲ್ 2022 ಆವೃತ್ತಿಯಲ್ಲಿಯೂ ಸಹ ಅವರು ಅಷ್ಟೇನು ಹೇಳಿಕೊಳ್ಳುವಷ್ಟು ಆಟವಾಡಿಲ್ಲ. ಆರ್‌ಸಿಬಿ ತಂಡದ ಪರ ಆಡುತ್ತಿರುವ ಅವರು 16 ಪಂದ್ಯಗಳನ್ನು ಆಡಿ 22.73ರ ಸರಾಸರಿಯಲ್ಲಿ 341ರನ್ ಗಳಿಸಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಪದರ್ಶನ ನೀಡದೆ ಕೇವಲ 2 ಅರ್ಧಶತಕಗಳನ್ನು ಗಳಿಸುವಷ್ಟರಲ್ಲಿ ಶಕ್ತರಾಗಿದ್ದಾರೆ. ಇದಲ್ಲದೇ ಬೆಂಗಳೂರು ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರ ಇತ್ತೀಚಿನ ಕಳಪೆ ಆಟವನ್ನು ಗಮನಿಸಿರುವ ಎಷ್ಟೋ ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ತಂಡವನ್ನು ಗೌರವಿಸಿದ ಗುಜರಾತ್ ಸರ್ಕಾರ – ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ

IPL 2022 VIRAT KOHLI

ಆದರೆ, ಶೋಯೆಬ್ ಅಕ್ತರ್, ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ನೀವು ವಿರಾಟ್ ಕೊಹ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತೀಲ್ಲ. ಅವರಿಗೆ ಗೌರವ ಕೊಡಿ. ನೀವು ವಿರಾಟ್ ಕೊಹ್ಲಿಗೆ ಏಕೆ ಗೌರವ ನೀಡುವುದಿಲ್ಲ? ಪಾಕಿಸ್ತಾನಿಯಾಗಿ ನಾನು ಹೇಳುತ್ತೇನೆ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರು ಏಕದಿನ ಪಂದ್ಯಗಳಲ್ಲಿ 110 ಶತಕಗಳನ್ನು ಹೊಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

VIRAT KOHLI 3 1

ನಂತರ ಕೊಹ್ಲಿಗೆ ಕೆಲ ಸೂಚನೆಗಳನ್ನು ನೀಡಿದ ಅವರು, ಭಯಪಡಬೇಡಿ ನೀವು 45 ವರ್ಷ ವಯಸ್ಸಿನವರೆಗೆ ಆಡಬೇಕು. ಪ್ರಸ್ತುತ ಪರಿಸ್ಥಿತಿಯು ನಿಮ್ಮನ್ನು 110 ಶತಕಗಳನ್ನು ಬಾರಿಸಲು ಸಿದ್ಧಗೊಳಿಸುತ್ತಿದೆ. ಜನರು ನಿಮ್ಮನ್ನು ಅಲ್ಲಗಳಿಯುತ್ತಿದ್ದಾರೆ. ಅವರು ನಿಮ್ಮ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ದೀಪಾವಳಿಯಂದು ನೀವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದೀರಿ, ಅದರಲ್ಲಿ ನಿಮ್ಮನ್ನು ಟೀಕಿಸಲಾಗಿದೆ. ಅವರು ನಿಮ್ಮ ಹೆಂಡತಿ, ನಿಮ್ಮ ಮಗುವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಯಾರ ಮಾತಿಗೂ ನೀವು ಕಿವಿಗೊಡದೇ ನನ್ನ ಮಾತುಗಳನ್ನು ನೆನಪಿನಲ್ಲಿಡಿ. ಅದನ್ನು ಇಂದಿನಿಂದಲೇ ಪಾಲಿಸಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *