ದೊಡ್ಮನೆ ಕಾಳಗ ಈಗಾಗಲೇ ಶುರುವಾಗಿ ಒಂದು ವಾರ ಪೂರೈಸಿದೆ. ಬಿಗ್ ಬಾಸ್ ಮನೆ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ. ಸ್ಪರ್ಧಿಗಳು ನಾನಾ ವಿಚಾರವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಜಯಶ್ರೀ ಆರಾಧ್ಯ ಅವರು ಗುರೂಜಿ ಆರ್ಯವರ್ಧನ್ ಮೇಕಪ್ ಮಾಡಿರೋದು ನೆಟ್ಟಿಗರ ಗಮನ ಸೆಳೆದಿದೆ.
Advertisement
ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್ ಎಂದು ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಬೆರೆತುಕೊಂಡು ಭಿನ್ನವಾಗಿ ಆಡುತ್ತಿದ್ದಾರೆ. ಹೀಗೆ ಬಿಗ್ ಬಾಸ್ ಮನೆಯ ಹೊರಾಂಗಣದಲ್ಲಿರುವಾಗ ಮೇಕಪ್ ಹಚ್ಚಿಕೊಳ್ಳುವ ಬಯಕೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಈ ವೇಳೆ ಹಿರಿಯ ಕಲಾವಿದೆ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಅವರು ಆರ್ಯವರ್ಧನ್ ಗುರೂಜಿಗೆ ಮೇಕಪ್ ಮಾಡಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್
Advertisement
Advertisement
ಜಯಶ್ರೀ ಅವರ ಸಹಾಯದಿಂದ ಕಣ್ಣಿಗೆ ಕಾಜಲ್, ಮುಖಕ್ಕೆ ಮೇಕಪ್, ತುಟಿಗೆ ಲಿಪ್ಸ್ಟಿಕ್ ಹಾಕಿಕೊಂಡಿದ್ದಾರೆ. ಬಳಿಕ ತುಟಿಗೆ ಹಚ್ಚಿರುವ ಮೇಕಪ್ ಕೊಂಚ ಜಾಸ್ತಿಯಾದಂತೆ ಗುರೂಜಿಗೆ ಕಂಡಿದೆ. ಕೂಡಲೇ ಉಜ್ಜಲು ಪ್ರಯತ್ನಿಸಿದ್ದಾರೆ. ಈ ವೇಳೆ ಹತ್ತಿರವಿದ್ದ ಸ್ಪರ್ಧಿ ಸೋಮಣ್ಣ ಮಾಚಿವಾಡ ಅವರು ಗುರೂಜಿಗೆ ಹಾಗೆಯೇ ಇರಲಿ ತೆಗೆಯಬೇಡಿ ಎಂದು ಹೇಳಿದ್ದಾರೆ. ಕನ್ನಡಿ ನೋಡಿದ ಗುರೂಜಿ ಜಯಶ್ರೀ ಅವರ ಬಳಿ, ಇಷ್ಟೇನಾ ಮೇಕಪ್ ಕರ್ರಗೆ ಕಾಣಿಸ್ತಾ ಇದ್ದೇನೆ, ಬೆಳ್ಳಗೆ ಮಾಡಿ ಎಂದಿದ್ದಾರೆ. ಒಟ್ನಲ್ಲಿ ಈಗ ಗುರೂಜಿ ಹೊಸ ಲುಕ್ ಜತೆಗೆ ಜಯಶ್ರೀ ಮೇಕಪ್ ಮಾಡಿರುವ ರೀತಿ ನೆಟ್ಟಿಗರ ಗಮನ ಸೆಳೆಯುತ್ತಿದೆ.