ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟ ಆರ್ಯವರ್ಧನ್ ಗುರೂಜಿ ಸದ್ಯ ಬಿಗ್ ಬಾಸ್ ಮನೆಯಲ್ಲೇ ಯಾರಿಗೂ ಬೇಡವಾಗಿದ್ದಾರೆ. ಟಾಸ್ಕ್ ವೊಂದರಲ್ಲಿ ಭಾಗಿಯಾಗಲು ಎರಡು ತಂಡಗಳನ್ನು ರಚಿಸಲಾಗಿತ್ತು. ಕರುನಾಡ ವಾರಿಯರ್ಸ್ ಮತ್ತು ಶಕ್ತಿ ಹೆಸರಿನಲ್ಲಿ ತಯಾರಾದ ಎರಡು ತಂಡಗಳು ತಲಾ ಆರು ಜನರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಎರಡೂ ತಂಡಗಳ ಕ್ಯಾಪ್ಟನ್ ಗುರೂಜಿ ಅವರನ್ನು ಬಿಟ್ಟೆ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡಿಕೊಂಡರು. ಹೀಗಾಗಿ ಆರ್ಯವರ್ಧನ್ ಯಾರಿಗೂ ಬೇಡವಾದ ಸ್ಪರ್ಧಿಯಾಗಿ ಉಳಿಯಬೇಕಾಯಿತು.
- Advertisement 2-
ತಾವೂ ಯಾವುದೇ ತಂಡದಲ್ಲಿ ಇಲ್ಲ ಎನ್ನುವ ನೋವು ಅವರನ್ನು ಕಾಡುತ್ತಿತ್ತು. ಹಾಗಾಗಿ ವೋಟ್ಸ್ ಪೋಲ್ ವೊಂದನ್ನು ಮಾಡಿ, ಆರ್ಯವರ್ಧನ್ ಗುರೂಜಿಯನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಿತ್ತಾ ಎಂದು ಪ್ರಶ್ನೆಯನ್ನು ಕೇಳಿತ್ತು. ಅದಕ್ಕೆ ನೋಡುಗರು ಸಕಾರಾತ್ಮಕ ರೀತಿಯಲ್ಲೇ ಉತ್ತರಿಸಿದ್ದರು. ಹಾಗಾಗಿ ಅನಿವಾರ್ಯವಾಗಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಾಯಿತು. ಈ ವಿಷಯವನ್ನು ಕೇಳಿದ ತಕ್ಷಣವೇ ಗುರೂಜಿ ಭಾವುಕರಾದರು. ಇದನ್ನೂ ಓದಿ:ಶೂಟಿಂಗ್ ವೇಳೆ ಅವಘಡ: ಆಸ್ಪತ್ರೆ ಸೇರಿದ ಬಾಹುಬಲಿ ಬಿಜ್ಜಳದೇವ ಪಾತ್ರಧಾರಿ ನಾಸರ್
- Advertisement 3-
- Advertisement 4-
ತಮ್ಮನ್ನು ಜನರು ಆಯ್ಕೆ ಮಾಡಿದ್ದಾರೆ ಎಂದು ವಿಷಯ ತಿಳಿದ ತಕ್ಷಣವೇ ಭಾವುಕರಾಗಿ ಕ್ಯಾಮೆರಾ ಮುಂದೆ ಬಂದ ಆರ್ಯವರ್ಧನ್, ಬಿಕ್ಕಿ ಬಿಕ್ಕಿ ಅತ್ತರು. ನಿಮ್ಮ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಅಭಿಮಾನಿಗಳಿಗೆ ಕೈ ಮುಗಿದು ಕೇಳಿಕೊಂಡರು. ಈ ಪ್ರೀತಿ ನಿರಂತರವಾಗಿರಲಿ ಎಂದು ಕೇಳಿಕೊಂಡರು.