ಡ್ರಗ್ಸ್ ಕೇಸ್ ಕ್ಲೀನ್ ಚಿಟ್ ಸಿಕ್ಕ ಬೆನ್ನಲ್ಲೆ ಅಮೆರಿಕಾಗೆ ಹೊರಟು ನಿಂತ ಶಾರುಖ್ ಪುತ್ರ

Public TV
1 Min Read
aryan khan 2

ಕ್ರೂಸ್ ಶಿಪ್ ನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿಯಲ್ಲಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವಾಗಿ, ಆನಂತರ ಜಾಮೀನು ಮೇಲೆ ಬಿಡುಗಡೆ ಆಗಿದ್ದರು. ಇದೀಗ ಆ ಕೇಸ್ ಕುರಿತಾಗಿ ವರದಿ ಸಲ್ಲಿಸಿದ್ದು, ಈ ಕೇಸ್ ನಲ್ಲಿ ಆರ್ಯನ್ ಗೆ ಕ್ಲೀನ್ ಚಿಟ್ ನೀಡಲಾಗಿದೆ. ಹಾಗಾಗಿ ವಶಪಡಿಸಿಕೊಂಡಿರುವ ಪಾಸ್ ಪೋರ್ಟ್ ಅವರಿಗೆ ಮರಳಿ ಸಿಗಲಿದೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

aryan khan 1

ಕೇಸ್ ಗೆ ಸಂಬಂಧಿಸಿದಂತೆ ಕೋರ್ಟ್ ಅವರಿಗೆ ವಿದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿತ್ತು. ಪಾಸ್ ಪೋರ್ಟ್ ವಶಪಡಿಸಿಕೊಂಡಿತ್ತು. ಇದೀಗ ಕ್ಲೀನ್ ಚಿಟ್ ಸಿಕ್ಕಿದ್ದರಿಂದ ವಿದೇಶಕ್ಕೆ ತೆರಳಲು ಅನುಮತಿ ಸಿಗಲಿದೆ ಮತ್ತು ವಶದಲ್ಲಿರುವ ಪಾಸ್ ಪೋರ್ಟ್ ಮರಳಿ ಸಿಗಲಿದೆ. ಪಾಸ್ ಪೋರ್ಟ್ ಸಿಗುತ್ತಿದ್ದಂತೆಯೇ ಅಮೆರಿಕಾಗೆ ಹಾರಲು ಆರ್ಯನ್ ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

aryan khan 3

ಶಾರುಖ್ ಖಾನ್ ಪುತ್ರಿಗೆ ನಟಿಯಾಗಿ ಸಿನಿಮಾ ರಂಗಕ್ಕೆ ಬರಲು ಒಲವಿದ್ದರೆ, ಮಗನಿಗೆ ನಟನಾಗಲು ಇಷ್ಟವಿಲ್ಲವಂತೆ. ನಿರ್ದೇಶನ ಮಾಡುವ ಉತ್ಸಾಹವಿದೆ. ಅಲ್ಲದೇ, ವೆಬ್ ಸೀರಿಸ್ ಮಾಡಲು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದರ ತಯಾರಿಗಾಗಿ ಆರ್ಯನ್ ಅಮೆರಿಕಾಗೆ ಹೊರಡಬೇಕಂತೆ. ಅಮೆರಿಕಾದಲ್ಲೇ ಸಿದ್ಧತೆ ಮುಗಿಸಿಕೊಂಡು ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ಸುದ್ದಿಯಾಗಿದೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

aryan khan 4

ಆರ್ಯನ್ ಗೆ ನಿರ್ದೇಶಕನಾಗುವ ಕನಸು ಬಾಲ್ಯದಿಂದಲೇ ಇದೆಯಂತೆ. ಅಪ್ಪನಂತೆ ನಟನಾಗುವುದಕ್ಕಿಂತ ನಿರ್ದೇಶಕನಾಗಿ ಸಾಧನೆ ಮಾಡಬೇಕು ಎನ್ನುವುದು ಮೊದಲಿನಿಂದಲೂ ತುಡಿತ. ಅದಕ್ಕೆ ಶಾರುಖ್ ಕೂಡ ಬೆಂಬಲ ಕೊಡುತ್ತಿದ್ದಾರಂತೆ. ಹಾಗಾಗಿ ಮುಂದಿನ ದಿನಗಳಲ್ಲಿ ಆರ್ಯನ್ ನಿರ್ದೇಶಕನಾಗಿ ಲಾಂಚ್ ಆಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *