ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಕಳೆದ ಮೂರು ವರ್ಷಗಳಿಂದ ಡ್ರಗ್ ಸೇವಿಸುತ್ತಿದ್ದಾರೆ ಎಂದು ಎನ್‍ಬಿಸಿ ಪರ ವಕೀಲರು ಹೇಳಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಮುಂಬೈ ಸೆಷನ್ಸ್ ಕೋರ್ಟ್ ಮುಂದೆ ಎಎಸ್‍ಜಿ ಅನಿಲ್ ಸಿಂಗ್ ಮಹತ್ವದ ಅಂಶದೊಂದಿಗೆ ವಾದ ಆರಂಭಿಸಿದ್ದಾರೆ.
Advertisement
ಮುಂಬೈ ಸಮುದ್ರದಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆಯಿಂದ ಈ ಅರ್ಜಿ ವಿಚಾರಣೆ ನಡೆಯುತ್ತಿದ್ದು ನ್ಯಾ.ವಿವಿ ಪಾಟೀಲ್ ಸುದೀರ್ಘ ವಾದ ಆಲಿಸುತ್ತಿದ್ದಾರೆ. ಇದನ್ನೂ ಓದಿ: ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ
Advertisement
ಇಂದು ವಾದ ಆಲಿಸಿದ ಎನ್‍ಸಿಬಿ ಪರ ವಕೀಲ ಅನೀಲ್ ಸಿಂಗ್, ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ ಸೇವನೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕರಣ ಮೂರು ವರ್ಷದಿಂದ ಮಾಧಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಬಳಿಕ ಮಾದಕ ವಸ್ತು ಪತ್ತೆಯಾಗಿದ್ದು, ಆರ್ಯನ್ ಖಾನ್ ಕೂಡಾ ಮಾದಕ ವ್ಯಸನಿ ಎನ್ನುವುದು ಸೂಚಿಸುತ್ತಿದೆ ಎಂದು ವಾದಿಸಿದ್ದಾರೆ.
Advertisement
Advertisement
ಆರ್ಯನ್ ಖಾನ್ ತಮ್ಮ ಬಳಿ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ವಾದಿಸಬಹುದು, ಆದರೆ ಆತನ ಸ್ನೇಹಿತ ತನ್ನ ಬಳಿ ಡ್ರಗ್ ಇರುವುದು ಒಪ್ಪಿಕೊಂಡಿದ್ದಾನೆ. ಪಂಚೆನಾಮೆಗೂ ಆರೋಪಿಗಳು ಸಹಿ ಮಾಡಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಆರೋಪಿಗಳಿಂದ ಎಷ್ಟು ಪ್ರಮಾಣದ ಮಾದಕ ವಸ್ತುವನ್ನು ವಶಕ್ಕೆ ಪಡೆದೆವು ಎನ್ನುವುದು ಮುಖ್ಯವಲ್ಲ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!
ಆರೋಪಿಗೆ ಪ್ರಕರಣಕ್ಕಿರುವ ನಂಟನ್ನು ಭೇದಿಸಬೇಕಿದೆ. ಹೀಗಾಗಿ ಇದು ಒಂದು ವರ್ಷದ ಶಿಕ್ಷೆಯ ಪ್ರಕರಣವೂ ಎನ್ನುವಂತಿಲ್ಲ. ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕು, ಯಾರನ್ನು ತನಿಖೆ ಒಳಪಡಿಸಬೇಕು ಅದು ತನಿಖಾಧಿಕಾರಿಯ ಹಕ್ಕು. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಅನಿಲ್ ಸಿಂಗ್ ಕೋರ್ಟ್ ಗೆ ಮನವಿ ಮಾಡಿಕೊಂಡರು.