Dharwad

ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ

Published

on

Share this

ಧಾರವಾಡ: ಕೋಟಿಗೊಬ್ಬ-3 ಸಿನಿಮಾ ಇವತ್ತು ರಾಜ್ಯಾದ್ಯಂತ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯಾಗಲೇ ಇಲ್ಲ. ಈ ಹಿನ್ನೆಲೆ ಸುದೀಪ್ ಅಭಿಮಾನಿ ಸಿನಿಮಾ ಮಂದಿರದಲ್ಲೇ ಕುಸಿದು ಬಿದ್ದಿದ್ದಾರೆ.

ಧಾರವಾಡದ ಪದ್ಮಾ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ ಸುದೀಪ್ ಅಭಿಮಾನಿಗಳು, ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ಬೇಸರಗೊಂಡು ವಾಪಸ್ ಆಗಿದ್ದಾರೆ. ಈ ನಡುವೆ ಸುದೀಪ್ ಅಭಿಮಾನಿಯೊಬ್ಬರು ಹಳ್ಳಿಯೊಂದರಿಂದ ಕೋಟಿಗೊಬ್ಬ-3 ನೋಡಲು ಬಂದಿದ್ದರು. ಕಿಚ್ಚನ ಸಿನಿಮಾ ಬಿಡುಗಡೆಯಾಗಲಿದೆ ಎಂದು ಟಿಕೆಟ್ ತೆಗೆದುಕೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ಚಿತ್ರಮಂದಿರ ಹಣವನ್ನು ವಾಪಸ್ ನೀಡಿದೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

ಹಣವನ್ನು ವಾಪಸ್ ಕೊಡುತಿದ್ದಂತೆಯೇ ಸಿನಿಮಾ ಹಾಲ್ ಎದುರು ಸುದೀಪ್ ಅಭಿಮಾನಿ ಕುಸಿದು ಬಿದ್ದದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಜನರು ಆ ಅಭಿಮಾನಿಗೆ ನೀರು ಕುಡಿಸಿ ವಾಪಸ್ ಕಳಿಸಿದರು. ಸಿನಿಮಾ ನೋಡಲು ಬಂದಿದ್ದ ಯುವಕ ಬೆಳಗ್ಗೆ ಯಾವುದೇ ಆಹಾರ ಸೇವಿಸದೇ ಬಂದಿದ್ದ ವಿಚಾರ ತಿಳಿದುಬಂದಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications