ಕನ್ನಡದ ಪ್ರತಿಭಾವಂತ ನಿರ್ದೇಶಕ ಅರವಿಂದ್ ಕುಪ್ಳಿಕರ್ (Arvind Kuplikar) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಯೋಗಿ ದ್ವಾರಕೀಶ್ (Yogi Dwarkeesh) ಹಣ ಹೂಡುತ್ತಿದ್ದಾರೆ. ಶರಣ್ (Sharan) ಹಾಗೂ ಅಮೃತಾ ಅಯ್ಯಂಗರ್ (Amruta Iyengar)ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಹೆಸರಾಂತ ತಾರಾಗಣವೇ ಚಿತ್ರದಲ್ಲಿದೆ. ಅಚ್ಯುತ್ ಕುಮಾರ್, ರಂಗಾಯಣ ರಘು, ರಾಜು ತಾಳಿಕೋಟೆ ಸೇರಿದಂತೆ ಹಲವು ಕಲಾವಿದರು ಪಾತ್ರ ಮಾಡಲಿದ್ದಾರೆ.
Advertisement
ಶರಣ್ ಹುಟ್ಟುಹಬ್ಬದ ದಿನದಂದು ಸಿನಿಮಾ ಘೋಷಣೆ ಮಾಡಿದ್ದ ನಿರ್ದೇಶಕ ಅರವಿಂದ್ ಕುಪ್ಳಿಕರ್ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುವೆ ಎಂದಿದ್ದರು. ಇದೀಗ ಸಿನಿಮಾದ ಶೂಟಿಂಗ್ ಪ್ರಾರಂಭಿಸುತ್ತಿದ್ದಾರೆ. ಬೆಂಗಳೂರು, ಬಾಗಲಕೋಟೆ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಯಲಿದೆ. ನಿರ್ದೇಶಕರ ಎರಡನೇ ಸಿನಿಮಾ ಇದಾಗಿದ್ದು, ಮೊದಲ ಸಿನಿಮಾದಲ್ಲೇ ಇವರಿಗೆ ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡೆಮಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿತ್ತು. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ
Advertisement
Advertisement
ಅರವಿಂದ್ ಕುಪ್ಳಿಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದರೆ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಯೋಗಿ ದ್ವಾರಕೀಶ್ ನಿರ್ಮಾಪಕರು. ಅದ್ವೈತ ಗುರುಮೂರ್ತಿ ಅವರ ಸಿನಿಮಾಟೋಗ್ರಫಿ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕೆ ಇರಲಿದೆ. ಮುಂದಿನ ದಿನಗಳಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಳ್ಳಲಿದ್ದಾರಂತೆ ಅರವಿಂದ್.
Advertisement
ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅಪಾರವಾಗಿ ಕೆಲಸ ಮಾಡಿದವರು ಅರವಿಂದ್. ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫ್ ಅವರ ಚೊಚ್ಚಲು ಸಿನಿಮಾವಾಗಿದ್ದರೂ, ಪ್ರಕಾಶ್ ರೈ, ಬಿ.ಸುರೇಶ್ ಸೇರಿದಂತೆ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ. ರಂಗಭೂಮಿ ಮತ್ತು ಕಿರುತೆರೆಯಲ್ಲಿ ನಟರಾಗಿಯೂ ಅರವಿಂದ್ ಗುರುತಿಸಿಕೊಂಡಿದ್ದಾರೆ. ಎರಡನೇ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಎದುರು ನಿಂತಿದ್ದಾರೆ.