ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 240 ಸರ್ಕಾರಿ ಶಾಲೆಗಳಲ್ಲಿ 12,430 ಹೊಸ ಸ್ಮಾರ್ಟ್ ತರಗತಿಗಳನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉದ್ಘಾಟಿಸಿದರು.
ಕನ್ಯಾ ವಿದ್ಯಾಲಯದಲ್ಲಿ 240 ಸರ್ಕಾರಿ ಶಾಲೆಗಳಲ್ಲಿ 12,430 ಹೊಸ ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಮತ್ತು ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್
Advertisement
Advertisement
ಗಮನಾರ್ಹ ವಿಷಯವೆಂದರೆ, ಆಮ್ ಆದ್ಮಿ ಪಕ್ಷ(ಎಎಪಿ) ಪಂಜಾಬ್‍ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಚುನಾವಣೆಯ ಒಂದು ದಿನ ಮುಂಚೆ ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿದೆ.
Advertisement
ಇಂದು ಉದ್ಘಾಟಿಸಿದ ಸ್ಮಾರ್ಟ್ ಶಾಲೆಗಳನ್ನು ಸೇರಿಸಿ ಕೇಜ್ರಿವಾಲ್ ಸರ್ಕಾರವು ಇರುವರೆಗೂ 20,000 ಸ್ಮಾರ್ಟ್ ಶಾಲೆಗಳನ್ನು ನಿರ್ಮಿಸಿದೆ. ಈ ಶಾಲೆಗಳ ವಿಶೇಷತೆ ಎಂದರೆ ತರಗತಿ ಕೊಠಡಿಗಳಲ್ಲಿ ಡಿಸೈನರ್ ಡೆಸ್ಕ್, ಗ್ರಂಥಾಲಯಗಳು, ಕಾರ್ಯಕ್ರಮಗಳ ನಿರ್ವಹಣೆಗಾಗಿ ವಿವಿಧೋದ್ದೇಶ ಸಭಾಂಗಣಗಳನ್ನು ಅಳವಡಿಸಲಾಗಿದೆ.
Advertisement
ಕಳೆದ 70 ವರ್ಷಗಳಿಂದ ಕಾಂಗ್ರೆಸ್ಸಿಗರು ಪಂಜಾಬ್ ಲೂಟಿ ಮಾಡಿದ್ದು, ಅದನ್ನು ಮುಂದುವರೆಸುತ್ತಾ ಬರುತ್ತಿದ್ದಾರೆ. ಪಂಜಾಬ್‍ನಲ್ಲಿ ಎಎಪಿ ಸರ್ಕಾರ ರಚಿಸಿದರೆ, ಅದನ್ನು ಶಾಶ್ವತವಾಗಿ ತಡೆಯಲಾಗುತ್ತದೆ ಎಂಬ ಭಯದಿಂದಾಗಿ ಎಎಪಿಯನ್ನು ತಡೆಯಲು ಒಗ್ಗೂಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು. ಇದನ್ನೂ ಓದಿ: ನ್ಯಾಯಾಲಯ ಆದೇಶಕ್ಕೆ ಧಾರ್ಮಿಕ ಮುಖಂಡರಿಂದ ಬೆಂಬಲ: ರಾಯಚೂರಿನಲ್ಲಿ ಗಲಾಟೆ ಇಲ್ಲ
ಎಲ್ಲ ಜನರು ಒಗ್ಗೂಡಿ ಅವರ ಲೂಟಿ ಮತ್ತು ಭ್ರಷ್ಟಾಚಾರದ ರಾಜಕಾರಣವನ್ನು ಕೊನೆಗಾಣಿಸಬೇಕೆಂದು ಜನರಿಗೆ ವಿನಂತಿಸಿದರು. ಎಎಪಿ ಅಧಿಕಾರಕ್ಕೆ ಬರಲಿದೆ ಮತ್ತು ಪಂಜಾಬ್‍ನಲ್ಲಿ ಪ್ರಾಮಾಣಿಕ ಸರ್ಕಾರ ರಚನೆಯಾಗುತ್ತದೆ. ಸಂಪನ್ಮೂಲಗಳ ಲೂಟಿ ಕೊನೆಗೊಳ್ಳಲಿದೆ. ಪಂಜಾಬ್ ಹಣವನ್ನು ಈಗ ರಾಜ್ಯದ ಜನತೆಗಾಗಿ ಖರ್ಚು ಮಾಡಲಾಗುವುದು ಎಂದರು.