ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)ಯಿಂದ 5ನೇ ಬಾರಿಗೆ ಸಮನ್ಸ್ ಪಡೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಇಂದು ಕೂಡ ವಿಚಾರಣೆಗೆ ಹಾಜರಾಗುವುದಿಲ್ಲ.
ಜನವರಿ 19 ರಂದು ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆಗೆ ಗೈರಾದ ನಂತರ, ಇಡಿ ನೀಡಿದ ಸಮನ್ಸ್ (ED Summons) ಕಾನೂನುಬಾಹಿರವಾಗಿದೆ ಮತ್ತು ಅವರನ್ನು ಬಂಧಿಸುವುದು ಅದರ ಏಕೈಕ ಗುರಿಯಾಗಿದೆ ಎಂದು ಎಎಪಿ ಆರೋಪಿಸಿದೆ.
Advertisement
Advertisement
ಎಎಪಿ ಮುಖ್ಯಸ್ಥರೂ ಆಗಿರುವ ಶ್ರೀ ಕೇಜ್ರಿವಾಲ್ ಅವರು ನವೆಂಬರ್ 2, ಡಿಸೆಂಬರ್ 21 ಮತ್ತು ಜನವರಿ 3 ರಂದು ನೀಡಿದ್ದ ಸಮನ್ಸ್ ಗಳಲ್ಲಿ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ನಿರಾಕರಿಸಿದ್ದರು. ಇದನ್ನೂ ಓದಿ: ಚಿಕ್ಕಪ್ಪನಿಂದಲೇ 11 ವರ್ಷದ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ
Advertisement
ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿರುವುದು ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ ಎಂದು ಟೀಕಿಸಿದೆ. ಅಲ್ಲದೇ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ದೆಹಲಿ ಸರ್ಕಾರವನ್ನು ಉರುಳಿಸುವುದು ಪ್ರಧಾನಿ ಮೋದಿಯವರ ಗುರಿಯಾಗಿದೆ. ಇದನ್ನು ಮಾಡಲು ನಾವು ಬಿಡುವುದಿಲ್ಲ ಎಂದು ಕಿಡಿಕಾರಿತ್ತು.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥರನ್ನು ಕೇಂದ್ರೀಯ ತನಿಖಾ ದಳ (CBI) ಏಪ್ರಿಲ್‌ನಲ್ಲಿ ಪ್ರಶ್ನಿಸಿತ್ತು. ಆದರೆ ಸಂಸ್ಥೆಯು ಆರೋಪಿಯನ್ನಾಗಿ ಮಾಡಿರಲಿಲ್ಲ. ಇಡಿಯಿಂದ ಮೊದಲ ಸಮನ್ಸ್ ಜಾರಿಯಾದಾಗಿನಿಂದಲೂ ದೆಹಲಿ ಮುಖ್ಯಮಂತ್ರಿಯನ್ನು ವಿಚಾರಣೆಯ ನಂತರ ಬಂಧಿಸುತ್ತದೆ ಎಂಬ ತೀವ್ರ ಊಹಾಪೋಹಗಳು ಇದ್ದವು.