ನವದೆಹಲಿ: ರಾಷ್ಟ್ರ ರಾಜಧಾನಿಯ ಸುಧಾರಣೆಗಾಗಿ ಕೇಂದ್ರದ ಸಹಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಶೀರ್ವಾದ ಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮನವಿ ಮಾಡಿದರು.
ದೆಹಲಿ ಪಾಲಿಕೆಯ ಚುನಾವಣೆ ಫಲಿತಾಂಶ (Delhi Municipal Election Results) ಪ್ರಕಟಗೊಂಡಿದ್ದು, ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ (AAP) ಅಧಿಕಾರಕ್ಕೆ ಏರಿದೆ. ಈ ಮೂಲಕ 15 ವರ್ಷಗಳ ಬಿಜೆಪಿ (BJP) ಆಡಳಿತ ಅಂತ್ಯಗೊಂಡಿದೆ. ಈ ಗೆಲುವಿನ ನಂತರ ಮಾತನಾಡಿದ ಕೇಜ್ರಿವಾಲ್, ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದ ದೆಹಲಿಯ ಜನರಿಗೆ ಧನ್ಯವಾದವನ್ನು ಸಲ್ಲಿಸಿದರು.
Advertisement
Advertisement
ನಾನು ಎಲ್ಲಾ ಅಭ್ಯರ್ಥಿಗಳಿಗೆ ಮತ್ತು ಎಲ್ಲಾ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಇಂದಿನವರೆಗೂ ರಾಜಕೀಯ ಇತ್ತು. ಇನ್ನು ಮುಂದೆ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್, ಆಪ್ ಪಕ್ಷಗಳು ಜೊತೆಗೂಡಿ ಕೆಲಸ ಮಾಡಬೇಕು ಎಂದು ಒತ್ತಾಯಿಸುತ್ತೇನೆ. ನೀವು ಈಗ ಬಿಜೆಪಿ ಕೌನ್ಸಿಲರ್ ಅಲ್ಲ. ನೀವು ದೆಹಲಿಯ ಕೌನ್ಸಿಲರ್‌ಗಳು ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿಯಲ್ಲಿ ಆಪ್ ಕಮಾಲ್ – 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ
Advertisement
Advertisement
ರಾಷ್ಟ್ರ ರಾಜಧಾನಿಯ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ವಿರೋಧ ಪಕ್ಷಗಳು ಒಗ್ಗೂಡಬೇಕು. ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರದ ಆಡಳಿತವನ್ನು ಕೊನೆಗೊಳಿಸಬೇಕು ಎಂದರು. ಇದನ್ನೂ ಓದಿ: ಸೈನಿಕರ ಕಲ್ಯಾಣ, ಸೇನೆಯ ಸಬಲೀಕರಣಕ್ಕೆ ಸರ್ಕಾರ ಬದ್ಧ: ಗೆಹ್ಲೋಟ್