‘ಆಪರೇಷನ್‌ ಜಾದುʼ ಅಡಿಯಲ್ಲಿ AAP ಮುಗಿಸಲು ಬಿಜೆಪಿ ಯತ್ನ: ಕೇಜ್ರಿವಾಲ್‌

Public TV
2 Min Read
ARVIND KEJRIWAL 2

– ಜೈಲಿನಲ್ಲಿ 2 ಬಾರಿ ಭಗವದ್ಗೀತೆ, ಒಮ್ಮೆ ರಾಮಾಯಣ ಓದಿದೆ

ನವದೆಹಲಿ: ‘ಆಪರೇಷನ್ ಜಾದು’ ಅಡಿಯಲ್ಲಿ ಆಮ್‌ ಆದ್ಮಿ (Aam Admi Party) ಪಕ್ಷವನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ (Arvind Kejriwal) ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸಿಎಂ ಕೇಜ್ರಿವಾಲ್ ಮಾತನಾಡಿ, ಆಮ್ ಅದ್ಮಿ ಪಕ್ಷವನ್ನು ನಾಶ ಮಾಡಲು ಸಾಧ್ಯವಿಲ್ಲ. ದೇವರ ಕೃಪೆ ಇಲ್ಲದಿದ್ದರೆ ನಮ್ಮ ಪಕ್ಷ ಕಳೆದ ವರ್ಷದಲ್ಲಿ ನಾಶವಾಗುತ್ತಿದ್ದೆವು. ನಮ್ಮ ಉದ್ದೇಶ ಸ್ಪಷ್ಟವಾಗಿದೆ, ಜನರ ಸೇವೆ ಮಾಡುವುದೇ ನಮ್ಮ ಉದ್ದೇಶವಾಗಿದೆ. ನಾವು ದೊಡ್ಡದಾಗಿ ಬೆಳೆಯಬಾರದು ಮತ್ತು ಅವರಿಗೆ ಸವಾಲಾಗಬಾರದು ಎಂದು ಬಿಜೆಪಿ ‘ಆಪರೇಷನ್ ಜಾದು’ ಆರಂಭಿಸಿದೆ ಎಂದರು.

‘ಆಪರೇಷನ್ ಜಾದು’ (Opeartion Jaadhu) ಮೂಲಕ ಎಎಪಿಯ ದೊಡ್ಡ ನಾಯಕರನ್ನು ಬಂಧಿಸಲಾಗುವುದು. ಮುಂಬರುವ ದಿನಗಳಲ್ಲಿ ಇನ್ನಷ್ಟು ನಾಯಕರನ್ನು ಬಂಧಿಸಲಾಗುತ್ತಿದೆ. ಎಎಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಇಡಿ ವಕೀಲರು ಈಗಾಗಲೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಈ ಚುನಾವಣೆ ಮುಗಿದ ಕೂಡಲೇ ಎಎಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು. ನಮ್ಮ ಖಾತೆಗಳನ್ನು ಸ್ಥಗಿತಗೊಳಿಸುತ್ತೇವೆ, ನಮ್ಮ ಕಚೇರಿಯನ್ನು ತೆರವುಗೊಳಿಸುತ್ತೇವೆ ಮತ್ತು ನಮ್ಮನ್ನು ಬೀದಿಗೆ ತರಲು ಬಿಜೆಪಿ ನಿರ್ಧರಿಸಿದೆ ಎಂದು ಕೇಜ್ರಿವಾಲ್‌ ತಿಳಿಸಿದರು. ಇದನ್ನೂ ಓದಿ: ಪೆನ್‌ಡ್ರೈವ್‌ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡ

2015ರಲ್ಲಿ ನಾನು ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಎಷ್ಟು ಆರೋಪಗಳನ್ನು ಎತ್ತಿದ್ದಾರೆ?.. ಈಗ ಅವರು ಮದ್ಯ ನೀತಿ ಹಗರಣ ನಡೆದಿದೆ ಎಂದು ಹೇಳುತ್ತಾರೆ. ಹಗರಣ ನಡೆದಿದೆಯೇ ಎಂದು ಜನರು ಕೇಳುತ್ತಿದ್ದಾರೆ. ಹಾಗಿದ್ರೆ ಹಣ ಎಲ್ಲಿದೆ? ಇತರ ಸ್ಥಳಗಳಲ್ಲಿ ದಾಳಿ ನಡೆದಾಗ ನೋಟುಗಳು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗುತ್ತದೆ, ಆದರೆ ಇಲ್ಲಿ ಏನೂ ಕಂಡುಬಂದಿಲ್ಲ. ಎಲ್ಲಿದೆ ಹಣ? ಬಿಜೆಪಿಯವರು ನಕಲಿ ಪ್ರಕರಣಗಳನ್ನು ದಾಖಲಿಸಿ ನಮ್ಮ ಜನರನ್ನು ಬಂಧಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

2 ಬಾರಿ ಭಗವದ್ಗೀತೆ ಓದಿದೆ: ಜೈಲಿನಲ್ಲಿ ನಾನು ಸಮಯ ವ್ಯರ್ಥ ಮಾಡಿಲ್ಲ. ಎರಡು ಬಾರಿ ಭಗವದ್ಗೀತೆ ಹಾಗೂ ಒಮ್ಮೆ ರಾಮಾಯಣವನ್ನು ಓದಿದೆ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

Share This Article