ಡೆಹ್ರಾಡೂನ್: ಉತ್ತರಖಾಂಡ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ, 18 ವರ್ಷ ಮೇಲ್ಪಟ್ಟ ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಪ್ರತಿ ತಿಂಗಳು 1,000 ರೂ. ಠೇವಣಿ ಇರಲಿಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಯುಎಸ್ ನಗರದ ಕಾಶಿಪುರಕ್ಕೆ ಕೇಜ್ರಿವಾಲ್ ಅವರು ಭೇಟಿ ನೀಡಿದ್ದರು. ಯುಎಸ್ ನಗರ, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ತವರು ಜಿಲ್ಲೆಯಾಗಿದೆ. ಇದನ್ನೂ ಓದಿ: ಸಿಬಿಐ, ಇ.ಡಿ ನಿರ್ದೇಶಕರ ಅಧಿಕಾರವಧಿ ವಿಸ್ತರಣೆಗೆ ಸಂಸತ್ ಒಪ್ಪಿಗೆ
Advertisement
Advertisement
ಉತ್ತರಾಖಂಡದ ಬಜೆಟ್ 55,000 ಕೋಟಿ ರೂಪಾಯಿ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಶೇ. 60ರಿಂದ 80ರಷ್ಟು ಕಮಿಷನ್ ಪಡೆಯುತ್ತಾರೆಂದು ಹಲವರು ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಂದು ವೇಳೆ ಶೇ. 20ರಷ್ಟು ಕಮಿಷನ್ ಪಡೆದರೂ, ಒಟ್ಟು ಬಜೆಟ್ ಮೊತ್ತದಲ್ಲಿ 11,000 ಕೋಟಿ ರೂಪಾಯಿ ರಾಜಕಾರಣಿಗಳ ಜೇಬು ಸೇರುತ್ತಿದೆ. ಅದನ್ನೆಲ್ಲ ಅವರು ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
Advertisement
ರಾಜಕಾರಣಿಗಳ ಹಣ ಸ್ವಿಸ್ ಬ್ಯಾಂಕ್‌ಗೆ ಹೋಗುವುದನ್ನು ನಾನು ತಪ್ಪಿಸುತ್ತೇನೆ. ಆ ಹಣ ನೇರವಾಗಿ ಮಹಿಳೆಯರ ಖಾತೆಗೆ ಸಂದಾಯವಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.- ಏನೇನು ವಿಶೇಷತೆ ಇದೆ?
Advertisement
ಉತ್ತರಾಖಂಡ ರಾಜ್ಯಕ್ಕೆ ಕೇಜ್ರಿವಾಲ್ ಅವರ 5ನೇ ಭೇಟಿ ಇದಾಗಿದೆ. ಈ ಹಿಂದಿನ ಭೇಟಿಗಳಲ್ಲೂ ಪ್ರತಿ ಮನೆಗೆ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ, ಆರು ತಿಂಗಳಿಗೊಮ್ಮೆ 1 ಲಕ್ಷ ಸರ್ಕಾರಿ ಉದ್ಯೋಗ ನೇಮಕಾತಿಗೆ ಅರ್ಜಿ ಆಹ್ವಾನ ಸೇರಿದಂತೆ ಹಲವು ಭರವಸೆಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ.