ನವದೆಹಲಿ: ಆ್ಯಪ್ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡಲಾಗುತ್ತದೆ. ಮತದಾರರಿಗೆ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
Advertisement
ಮೊಹಾಲಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಪಂಜಾಬ್ ರಾಜ್ಯವನ್ನು ಸಮೃದ್ಧಗೊಳಿಸಲಾಗುವುದು. ಎಲ್ಲರಿಗೂ ಉದ್ಯೋಗ ಅವಕಾಶವನ್ನು ನೀಡಿತ್ತೇವೆ. ಪಂಜಾಬ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕುಡಿದು ಬಂದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ!
Advertisement
Advertisement
ಭ್ರಷ್ಟಾಚಾರವನ್ನು ಕೊನೆಗೊಳಿಸುತ್ತೇವೆ ಹಾಗೂ ನಾವು 16,000 ಮೊಹಲ್ಲಾ ಕ್ಲಿನಿಕ್‍ಗಳನ್ನು ಸ್ಥಾಪಿಸುತ್ತೇವೆ ಮತ್ತು ಪ್ರತಿ ಪಂಜಾಬಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ. ಆಮ್ ಆದ್ಮಿ ಪಾರ್ಟಿ ಸರ್ಕಾರವು ರೈತರ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್