ನವದೆಹಲಿ: ಕೇಜ್ರಿವಾಲ್ (Arvind Kejriwal) ಮದ್ಯದ ಕಡೆ ಹೆಚ್ಚು ಗಮನಹರಿಸಿದ್ದರು. ಅಲ್ಲದೆ ಹಣದ ಬಲ ಹೊಂದಿದ್ದರು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಹೇಳಿದ್ದಾರೆ.
ದೆಹಲಿ ಚುನಾವಣೆ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಅಭ್ಯರ್ಥಿಯಲ್ಲಿ ಒಳ್ಳೆಯ ನಡವಳಿಕೆ, ಯೋಚನೆ, ಆಪಾದನೆ ರಹಿತ ಜೀವನ ಹಾಗೂ ತ್ಯಾಗ ಮನೋಭಾವವಿದ್ದರೆ ಮತದಾರರರು ಅಂತಹವರ ಮೇಲೆ ನಂಬಿಕೆಯಿಡುತ್ತಾರೆ ಎಂದರು.ಇದನ್ನೂ ಓದಿ: ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್ ಮನವಿ
Advertisement
Advertisement
ಈ ವಿಚಾರವನ್ನು ಕೇಜ್ರಿವಾಲ್ ಬಳಿಯೂ ಹೇಳಿದ್ದೆ. ಆದರೆ ಅವರು ಇದರ ಬಗ್ಗೆ ಗಮನಕೊಡಲಿಲ್ಲ. ಬದಲಾಗಿ ಅವರಲ್ಲಿ ಹಣದ ಹೊಳೆಯಿದ್ದಿದ್ದರಿಂದ ಮದ್ಯದ ಕಡೆಗೆ ಗಮನಹರಿಸಿದರು. ಇದರಿಂದಲೇ ಅವರು ಕಡಿಮೆ ಮತಗಳನ್ನು ಪಡೆಯುತ್ತಿದ್ದಾರೆ ಎಂದು ದೂರಿದರು.
Advertisement
ರಾಜಕೀಯದಲ್ಲಿ ಆಪಾದನೆಗಳು ಬರುತ್ತದೆ. ಅದು ಸುಳ್ಳು ಎಂದು ನಾವು ಸಾಬೀತು ಮಾಡಬೇಕು ಆದರೆ ಅವರು ಆ ವಿಚಾರದ ಕಡೆಗೆ ತಲೆಹಾಕಲೇ ಇಲ್ಲ. ಸತ್ಯ ಯಾವತ್ತಿದ್ದರು ಸತ್ಯವಾಗಿರುತ್ತದೆ. ಆದ್ದರಿಂದ ನಾನು ಆ ಪಕ್ಷದಿಂದ ದೂರವಿರಬೇಕು ಎಂದು ನಿರ್ಧರಿಸಿದೆ. ಅವತ್ತಿನಿಂದ ಆಪ್‌ನಿಂದ ನಾನು ದೂರ ಇದ್ದೇನೆ ಎಂದರು.ಇದನ್ನೂ ಓದಿ: Delhi Election Results | ಒಂದು ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್ – `ಕೈʼ ನಾಯಕರಿಗೆ ಮುಖಭಂಗ