ನವದೆಹಲಿ: ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಕೇಜ್ರಿವಾಲ್ (Arvind Kejriwal) ಹಣಕ್ಕಾಗಿ ನೂತನ ಲಿಕ್ಕರ್ ಪಾಲಿಸಿ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷವು (AAP) ಮದ್ಯ ನೀತಿಯನ್ನು ಮಾಡಬಾರದಿತ್ತು. ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿ ಇಂದು ಮದ್ಯ ನೀತಿಯನ್ನು ಸಿದ್ಧಪಡಿಸಿದ್ದು ನನಗೆ ಬೇಸರ ತಂದಿದೆ. ಈಗ ಏನಾಗುತ್ತದೆಯೋ ಅದು ಕಾನೂನಿನ ಪ್ರಕಾರ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ (Anna Hazare) ಹೇಳಿದ್ದಾರೆ.
ಈ ಹಿಂದೆಯೂ ಅಣ್ಣಾ ಹಜಾರೆ, ಮದ್ಯ ನೀತಿಯ ವಿರುದ್ಧ ಮಾತನಾಡಿದ್ದರು. 2022 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ನೀತಿಯ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಪತ್ರದಲ್ಲಿ ನೀವು ಮುಖ್ಯಮಂತ್ರಿಯಾದ ನಂತರ ನಾನು ಇದೇ ಮೊದಲ ಬಾರಿಗೆ ನಿಮಗೆ ಪತ್ರ ಬರೆಯುತ್ತಿದ್ದೇನೆ. ಏಕೆಂದರೆ ನಿಮ್ಮ ಸರ್ಕಾರದ ಮದ್ಯ ನೀತಿಯ ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವಾಗಿದೆ. ಮದ್ಯದಂತೆಯೇ ಅಧಿಕಾರವೂ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಇದೆ ಎಂದು ತೋರುತ್ತದೆ ಎಂದು ಟೀಕಿಸಿದ್ದರು. ಇದನ್ನೂ ಓದಿ: ದೆಹಲಿ ಮದ್ಯ ಹಗರಣದಲ್ಲಿ ಕೇಜ್ರಿವಾಲ್ ಕಿಂಗ್‌ಪಿನ್: ಇಡಿ
Advertisement
Advertisement
ಬಂಧನದ ಹೊರತಾಗಿಯೂ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಎಪಿ ಹೇಳಿದೆ.
Advertisement
Advertisement
ಅಣ್ಣಾ ಹಜಾರೆ ಅವರು 2011 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಕೇಜ್ರಿವಾಲ್ ಅವರು ಸಹ ಹಜಾರೆಯೊಂದಿಗೆ ಕೈಜೋಡಿಸಿದ್ದರು. ಬಳಿಕ ರಾಜಕೀಯಕ್ಕಿ ಕೇಜ್ರಿವಾಲ್ ಧುಮುಕಿದಾಗ ಅಣ್ಣಾ ಹಜಾರೆ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಇದನ್ನೂ ಓದಿ: ಕೇಜ್ರಿವಾಲ್ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್ ದೂರು ನೀಡಿತ್ತು: ಬಿಜೆಪಿ ತಿರುಗೇಟು