ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ (Liquor Scam) ಜಾರಿ ನಿರ್ದೇಶನಾಲಯ (Enforcement Directorate) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) 6ನೇ ಬಾರಿ ಸಮನ್ಸ್ ನೀಡಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ಫೆ.19 ರಂದು ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಇದನ್ನೂ ಓದಿ: Rajyasabha Polls: ಕಾಂಗ್ರೆಸ್‌ನಿಂದ ಕರ್ನಾಟಕದ ಮೂವರಿಗೆ ಟಿಕೆಟ್
Advertisement
Advertisement
ಸತತ ಆರನೇ ಬಾರಿಗೆ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆ ಕರೆದಿದೆ. ಈ ಹಿಂದೆ ಫೆಬ್ರವರಿ 2, ಜನವರಿ 18 ಮತ್ತು ಜನವರಿ 3 ರಂದು ಮತ್ತು 2023 ರಲ್ಲಿ ಡಿಸೆಂಬರ್ 21 ಮತ್ತು ನವೆಂಬರ್ 2 ರಂದು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
Advertisement
ದೆಹಲಿ ಸಿಎಂ ಕೇಜ್ರಿವಾಲ್, ಉದ್ದೇಶಪೂರ್ವಕವಾಗಿ ಸಮನ್ಸ್‌ಗೆ ಅವಿಧೇಯರಾಗಿದ್ದಾರೆ. ಕುಂಟು ನೆಪಗಳನ್ನು ನೀಡುತ್ತಿದ್ದಾರೆ ಎಂದು ಇ.ಡಿ ತನ್ನ ದೂರಿನಲ್ಲಿ ಆರೋಪಿಸಿದೆ. ಗೌರವಾನ್ವಿತ ಸ್ಥಾನದಲ್ಲಿರುವವರು ಹೀಗೆ ಮಾಡಿದರೆ, ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಅಜ್ಜನ ಕನಸು ನೆರವೇರಿಸಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮೊಗ
Advertisement
ಕೇಜ್ರಿವಾಲ್ ಅವರು ಈ ಹಿಂದೆ ಇ.ಡಿಗೆ ಪತ್ರ ಬರೆದಿದ್ದರು. ಸಮನ್ಸ್‌ಗಳನ್ನು, ಅಕ್ರಮ ಮತ್ತು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದರು. ಚುನಾವಣೆ ಪ್ರಚಾರಕ್ಕೆ ಬರದಂತೆ ತಡೆಯುವ ಉದ್ದೇಶ ಹೀಗೆ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.