ದೆಹಲಿಯ ಜನರಿಗೆ ಮತ್ತೊಂದು ಕೊಡುಗೆ ನೀಡಿದ ಅರವಿಂದ್ ಕೇಜ್ರಿವಾಲ್

Public TV
1 Min Read
arvind

-ಬಾಕಿ ವಾಟರ್ ಬಿಲ್ ಮನ್ನಾ

ನವದೆಹಲಿ: ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರಪೂರ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಇಂದು ದೆಹಲಿಯ ಜನರು ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಮನೆಯಲ್ಲಿ ವಾಟರ್ ಮೀಟರ್ ಅಳವಡಿಸಿಕೊಂಡಿರುವ ಬಹುತೇಕ ಎಲ್ಲರೂ ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ವಾಟರ್ ಬಿಲ್ ದೆಹಲಿಯ ಜನರಿಗೆ ದೊಡ್ಡ ಸಮಸ್ಯೆಯಾಗಿತ್ತು. ಕೆಲವರಿಗೆ ತಿಂಗಳವರೆಗೆ ವಾಟರ್ ಬಿಲ್ ಸಿಗುತ್ತಿರಲಿಲ್ಲ. ಮೀಟರ್ ರೀಡಿಂಗ್ ಮಾಡದೇ ಬಿಲ್ ಬರುತ್ತಿತ್ತಿದ್ದರಿಂದ ದೊಡ್ಡ ಗೊಂದಲವಾಗಿತ್ತು. ಹೀಗಾಗಿ ಆಪ್ ಸರ್ಕಾರ ವಾಟರ್ ಬಿಲ್ ಗಾಗಿ ಹೊಸ ವ್ಯವಸ್ಥೆಯನ್ನು ಜಾರಿ ತಂದಿತ್ತು. ನೇರವಾಗಿ ನಳದಿಂದ ಮೀಟರ್ ರೀಡಿಂಗ್ ರ ತೆಗೆದುಕೊಳ್ಳುತ್ತಿತ್ತು. ಈ ಹೊಸ ವ್ಯವಸ್ಥೆ ಅಳವಡಿಕೆಯಿಂದಾಗಿ ಹಳೆಯ ಬಿಲ್ ಗಳು ಬೆಳಕಿಗೆ ಬಂದವು. ಹಾಗಾಗಿ ಹಳೆಯ ಬಿಲ್ ಗಳನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ನವೆಂಬರ್ 30ರೊಳಗೆ ಮನೆಯಲ್ಲಿ ಫಂಕ್ಷನಲ್ ಮೀಟರ್ ಅಳವಡಿಸಿಕೊಂಡ ಜನರಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದಾಯಕ್ಕ ಅನುಗುಣವಾಗಿ ಸ್ಥಳೀಯ ನಿವಾಸಿಗಳನ್ನು 13 (ಎ ಟು ಎಚ್) ವಿಭಾಗಗಳಾಗಿ ವಿಂಗಡಿಸಲಾಗಿದೆ. ಎ ಮತ್ತು ಬಿ ಕೆಟಗರಿ ಜನರಿಗೆ ಶೇ.25, ಸಿ ಕೆಟಗರಿಗೆ ಶೇ.50ರಷ್ಟು ಬಿಲ್ ಮನ್ನಾ ಆಗಲಿದೆ. ಡಿ ಕೆಟಗರಿಯವರಿಗೆ ಶೇ.75 ಮತ್ತು ಇ, ಎಫ್, ಜಿ, ಎಚ್ ಕೆಟಗರಿವರಿಗೆ ಶೇ.100 ರಷ್ಟು ವಾಟರ್ ಬಿಲ್ ಮನ್ನಾ ಆಗಲಿದೆ. ಈ ಯೋಜನೆಗಾಗಿ ಸರ್ಕಾರ 600 ಕೋಟಿ ರೂ. ವ್ಯಯ ಮಾಡಲಿದೆ.

ರಕ್ಷಾ ಬಂಧನ ಹಬ್ಬದಂದು ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮೆಟ್ರೋ, ದೆಹಲಿ ನಗರ ಸಾರಿಗೆ ಹಾಗೂ ಸ್ಥಳೀಯ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆಯನ್ನು ಘೋಷಿಸಿದ್ದರು. ಆಗಸ್ಟ್ 1ರಂದು ದೆಹಲಿಯ ನಿವಾಸಿಗಳಿಗೆ 200 ಯುನಿಟ್ ಗಳ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *