ಇಟಾನಗರ್: ಅರುಣಾಚಲ ಪ್ರದೇಶದ ಬೋಗಾಪನಿ ಎಂಬಲ್ಲಿ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಎನ್‍ಪಿಪಿ ಶಾಸಕ ತಿರಾಂಗ್ ಅಬೋಹ್ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.
ತಿರಾಂಗ್ ಅಬೋಹ್ ಅವರು ಕೋನ್ಸಾ ದಕ್ಷಿಣ ಕ್ಷೇತ್ರದಿಂದ ಎನ್‍ಪಿಪಿ ಪಕ್ಷದ ಶಾಸಕರಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಿಂದ ಸ್ಪರ್ಧಿಸಿದ್ದರು. ಫಲಿತಾಂಶಕ್ಕೆ ಎರಡು ದಿನ ಬಾಕಿ ಇರುವಾಗಲೇ ತಿರಾಂಗ್ ಅಬೋಹ್ ಅವರು ಉಗ್ರರು ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.
Advertisement
The NPP strongly condemns the brutal attack on Shri Tirong Aboh and his family and his security personnels.
— Conrad K Sangma (@SangmaConrad) May 21, 2019
Advertisement
ಶಾಸಕ ತಿರಾಂಗ್ ಅಬೋಹ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೋಗಾಪನಿ ಎಂಬಲ್ಲಿ ಶಾಸಕರ ಕಾರನ್ನು ತಡೆದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ತಿರಾಂಗ್ ಅಬೋಹ್ ಸೇರಿದಂತೆ 7 ಜನರು ಮೃತಪಟ್ಟಿದ್ದಾರೆ.
Advertisement
ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲ್ಯಾಂಡ್ (ಎನ್‍ಎಸ್‍ಸಿಎನ್) ಸಂಘನೆಯ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ತಿರಾಂಗ್ ಅಬೋಹ್ ಅವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
Advertisement
ಕೋನ್ಸಾ ದಕ್ಷಿಣ ಕ್ಷೇತ್ರದಲ್ಲಿ ನ್ಯಾಯಯುತ ಚುನಾವಣೆಯಾಗಿಲ್ಲ. ಹೀಗಾಗಿ ಮರು ಚುನಾವಣೆ ನಡೆಸಬೇಕು ಎಂದು ತಿರಾಂಗ್ ಅಬೋಹ್ ಅವರು, ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದರು. ಈ ಕಾರಣಕ್ಕೆ ಗುಂಡಿನ ದಾಳಿ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
The NPP is extremely shocked and saddened by the news of the death of its MLA Shri Tirong Aboh (Arunachal Pradesh) and his family. We condemn the brutal attack and urge @rajnathsingh and @PMOIndia to take action against those responsible for such attack.
— Conrad K Sangma (@SangmaConrad) May 21, 2019
ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಕೆ.ಸಂಗ್ಮಾ ಅವರು, ಶಾಸಕ ತಿರಾಂಗ್ ಅಬೋಹ್ ಅವರ ಸಾವಿನ ಸುದ್ದಿಯಿಂದ ಎದೆ ಭಾರವಾಗಿದೆ. ಶಾಸಕರ ಕುಟುಂಬದವರಿಗೆ ಹಾಗೂ ಸಂಬಂಧಿಕರಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.