ಬೀಜಿಂಗ್: ಅರುಣಾಚಲ ಪ್ರದೇಶ (Arunachal Pradesh) ಚೀನಾದ (China) ಭಾಗ. ಆದರೆ ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಚೀನಾ ಪ್ರತಿಪಾದಿಸಿದೆ.
ಗಡಿ ರಾಜ್ಯವಾದ ಅರುಣಾಚಲ ಪ್ರದೇಶ ಭಾರತದ ನೈಸರ್ಗಿಕ ಭಾಗ. ಆ ರಾಜ್ಯದ ಮೇಲೆ ಚೀನಾ ಹಕ್ಕು ಸಾಧಿಸುವುದು ಅಸಂಬದ್ಧ ಎಂದು ಭಾರತ (India) ಪ್ರತಿಪಾದಿಸಿತ್ತು. ಎಸ್.ಜೈಶಂಕರ್ (Jaishankar) ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನೀತಿ ಆಯೋಗದ ಮಾಜಿ ಉದ್ಯೋಗಿ ಲಂಡನ್‌ನಲ್ಲಿ ಅಪಘಾತಕ್ಕೆ ಬಲಿ
Advertisement
Advertisement
ಭಾರತ ಮತ್ತು ಚೀನಾ ನಡುವಿನ ಗಡಿಯನ್ನು ಎಂದಿಗೂ ಇತ್ಯರ್ಥಪಡಿಸಲಾಗಿಲ್ಲ. ಅರುಣಾಚಲ ಪ್ರದೇಶಕ್ಕೆ ಚೀನಾದ ಅಧಿಕೃತ ಹೆಸರು ಜಂಗ್ನಾನ್. ಭಾರತವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದೆ. ಅದು ಮೊದಲು ಚೀನಾದ ಭಾಗವಾಗಿತ್ತು ಎಂದು ಲಿನ್ ಹೇಳಿದ್ದಾರೆ.
Advertisement
ಚೀನಾವು ಈ ಪ್ರದೇಶದ ಮೇಲೆ ಪರಿಣಾಮಕಾರಿ ಆಡಳಿತವನ್ನು ಹೊಂದಿದೆ. ಇದು ನಿರ್ವಿವಾದದ ಸತ್ಯ. ಅಕ್ರಮವಾಗಿ ವಶಪಡಿಸಿಕೊಂಡ ಭೂಪ್ರದೇಶವನ್ನು ಭಾರತವು 1987 ರಲ್ಲಿ ಅರುಣಾಚಲ ಪ್ರದೇಶ ಎಂದು ಕರೆಯಿತು. ನಾವು ಅವರ ಕ್ರಮಗಳ ವಿರುದ್ಧ ಬಲವಾದ ಹೇಳಿಕೆಗಳನ್ನು ನೀಡಿದ್ದೇವೆ. ಅವರ ಕ್ರಮವು ನಿಷ್ಪರಿಣಾಮಕಾರಿಯಾಗಿದೆ ಎಂದು ಲಿನ್ ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಅನಾಗರಿಕ ಭಯೋತ್ಪಾದಕ ಕೃತ್ಯ: ಉಗ್ರರ ದಾಳಿಗೆ ಪುಟಿನ್ ಆಕ್ರೋಶ
Advertisement
ಅರುಣಾಚಲ ಪ್ರದೇಶದ ಮೇಲಿನ ಹಕ್ಕು ಕುರಿತು ಚೀನಾ ಈ ತಿಂಗಳಲ್ಲಿ ನಾಲ್ಕನೇ ಬಾರಿ ಮಾತನಾಡಿದೆ. ಮಾ.9 ರಂದು ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆ ಸಲ್ಲಿಸಿರುವುದಾಗಿ ಬೀಜಿಂಗ್ ಹೇಳಿತ್ತು.
ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಚೀನಾ ಪ್ರತಿಪಾದಿಸಿದೆ. ತನ್ನ ಹಕ್ಕುಗಳನ್ನು ಸಾಧಿಸಲು ಭಾರತೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುವುದು ಸರಿಯಲ್ಲ ಎಂದು ವಿರೋಧಿಸಿದೆ. ಅರುಣಾಚಲ ಪ್ರದೇಶವು ಚೀನಾದ ಭಾಗವಾಗಿದೆ ಎಂದು ಚೀನಾದ ರಕ್ಷಣಾ ಸಚಿವರು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ