ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾ ಮತ್ತು ನಿರೂಪಣೆಯ ಮೂಲಕ ಗಮನ ಸೆಳೆದಿರುವ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿಶೇಷ ಸಾಧನೆಯೊಂದನ್ನ ಮಾಡಿದ್ದಾರೆ. ಮಗನ ಅಪರೂಪದ ಸಾಧನೆಯ ಕುರಿತು ನಟ ಅರುಣ್ ಸಾಗರ್ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.
View this post on Instagram
ಸಾಕಷ್ಟು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಕ್ರೀಡಾ ಜಗತ್ತಿನಲ್ಲಿ ವಿಶೇಷ ಸಾಧನೆಯನ್ನ ಮಾಡಿ, ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ಸೂರ್ಯ, ದೇಶ ವಿದೇಶಗಳಲ್ಲಿ `ಮುವಾಯ್‌ಥೈ’ ಕ್ರೀಡೆ ಆಡಿ ಗೆದ್ದಿದ್ದಾರೆ. ಈಗ ಥಾಯ್ಲೆಂಡ್‌ನ ರಾಜಡಮ್ನೆರ್ನ್ ಕ್ರೀಡಾಂಗಣದಲ್ಲಿ ಆಡಿ ಗೆದ್ದ ಮೊದಲ ಮುವಾಯ್‌ಥೈ ಪಟು ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಪತ್ನಿಯ, ದುಬಾರಿ ಮಿನಿ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ
View this post on Instagram
ರಾಜಡಮ್ನೆರ್ನ್ ಪ್ರಪಂಚದ ಮೊದಲ ಮುವಾಯ್‌ಥೈ ಸ್ಟೇಡಿಯಂ ಆಗಿದ್ದು, ಹಾಗಾಗಿ ಇಲ್ಲಿ ಪಂದ್ಯ ಆಡಿ, ಗೆಲ್ಲವುದು ಅದೆಷ್ಟೋ ಪಟುಗಳ ಕನಸುಸಾಗಿದೆ. ಇದೀಗ ಸೂರ್ಯ ಸಾಗರ್‌ನ ಅಪರೂಪದ ಸಾಧನೆ ನೋಡಿ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಸೂರ್ಯಗೆ ಶುಭಹಾರೈಸಿದಿದ್ದಾರೆ.