ನವದೆಹಲಿ: ಕುಮಾರಸ್ವಾಮಿ ಕಣ್ಣೀರು ನೋಡಿದರೆ ಹಿಂದಿ ದುರಂತ ಸಿನಿಮಾಗಳು ನೆನಪಾಗುತ್ತದೆ. ಈ ಹಿಂದೆ ದೇವೇಗೌಡರಿಗೆ ಆದ ಸ್ಥಿತಿಯೇ ಕುಮಾರಸ್ವಾಮಿಗೂ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಈ ಕುರಿತು ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಅರುಣ್ ಜೇಟ್ಲಿ, ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳನ್ನು ಇಡೀ ದೇಶವೇ ಗಮನ ಹರಿಸುತ್ತಿದ್ದು, ಯಾವುದೇ ಉತ್ತಮ ಅಜೆಂಡಾ ಹೊಂದಿರದ ಸಮ್ಮಿಶ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಚಂದ್ರ ಶೇಖರ್ ಅವರ 1996-98ರ ಸಮ್ಮಿಶ್ರ ಸರ್ಕಾರಕ್ಕೆ ಉಂಟಾದ ಪರಿಸ್ಥಿತಿ ಎದುರಾಗಲಿದೆ. ಕೇವಲ ಮೋದಿ ಅವರನ್ನು ಹೊರಗಿಡುವ ಅಜೆಂಡಾದೊಂದಿಗೆ ಮಾತ್ರ ಸರ್ಕಾರ ರಚನೆಯಾಗಿದೆ ಎಂದು ಹೇಳಿದ್ದಾರೆ.
Advertisement
https://www.facebook.com/notes/arun-jaitley/is-the-karnataka-a-preview-of-what-the-congress-and-the-federal-front-promise-fo/828212934033923/
Advertisement
ಇದೇ ವೇಳೆ ವಿರೋಧಿ ಪಕ್ಷಗಳ ನಡೆಯ ಕುರಿತು ಕಿಡಿಕಾರಿರುವ ಅವರು, ಕಳೆದ ಕೆಲ ದಿನಗಳಿಂದ ಪರ್ಯಾಯ ಶಕ್ತಿ ಕೇಂದ್ರದ ಕುರಿತ ಚರ್ಚೆ ನಡೆಯುತ್ತಿದೆ. ಸೈದ್ಧಾಂತಿಕವಾಗಿ ಹೋಲಿಕೆ ಇಲ್ಲದ ಪಕ್ಷಗಳು ದೇಶಕ್ಕೆ ಮಾಡುವುದಾದರೂ ಏನು? ಆದರೆ ಕೆಲ ವಿಭಿನ್ನ ರಾಜಕೀಯ ಪಕ್ಷಗಳು ಒಟ್ಟಾಗಲು ಯತ್ನಿಸುತ್ತಿದ್ದು, ಈ ವೇಳೆ ಕೆಲ ಪಕ್ಷಗಳ ನಾಯಕರು ಉದ್ವೇಗಕ್ಕೆ ಒಳಗಾಗಿದ್ದರೆ ಇತರರು ತಮ್ಮ ಸೈದ್ಧಾಂತಿಕ ಸ್ಥಾನಮಾನವನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ ದೇಶದ ಪ್ರಗತಿ ಹಾಗೂ ಸ್ಥಿರ ರಾಜಕೀಯ ವಾತಾವರಣವನ್ನು ನಿರ್ಮಾಣ ಮಾಡಲು ಟಿಎಂಸಿ, ಡಿಎಂಕೆ, ಬಿಎಸ್‍ಪಿ, ಮತ್ತು ಜೆಡಿ(ಎಸ್) ಮುಂತಾದ ಪಕ್ಷಗಳಿಗೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳುವ ಅವಕಾಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
Advertisement
ಸಿಎಂ ಕುಮಾರಸ್ವಾಮಿ ಅವರು ಕೆಲ ದಿನಗಳ ಹಿಂದೆ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ ತಾವು ಸಮ್ಮಿಶ್ರ ಸರ್ಕಾರದಲ್ಲಿ ವಿಷಕಂಠರಾಗಿದ್ದು, ನಾನು ಸಿಎಂ ಆಗಿರೋದಕ್ಕೆ ನೀವೆಲ್ಲಾ ಸಂಭ್ರಮಿಸುತ್ತಿದ್ದೀರಾ. ನಮ್ಮ ಅಣ್ಣನೋ, ತಮ್ಮನೋ ಸಿಎಂ ಆಗಿದ್ದಾರೆ ಎಂದು ಸಂತೋಷ ಪಟ್ಟಿದ್ದೀರಾ. ಆದರೆ ನನಗೆ ಸಂತೋಷವಿಲ್ಲ. ನಾನೇ ಎಲ್ಲಾ ನೋವನ್ನು ವಿಷಕಂಠನಾಗಿ ನುಂಗಿ ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿ ಕಣ್ಣಿರು ಹಾಕಿದ್ದರು. ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಬೆನ್ನಲ್ಲೇ ಅರುಣ್ ಜೇಟ್ಲಿ ಅವರು ನೇರವಾಗಿ ಕರ್ನಾಟಕ ರಾಜಕೀಯ ಬೆಳವಣಿಕೆ ಕುರಿತು ವಿಶ್ಲೇಷಣೆ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.