ಚಿಕ್ಕೋಡಿ: ಹಲ್ಲು ತಗೆದ ಜೀವಂತ ನಾಗರಹಾವನ್ನು ಶಿವನ ಪಾತ್ರಧಾರಿ ಕೊರಳಲ್ಲಿ ಧರಿಸಿ ಸ್ಟೇಜ್ ಮೇಲೆ ಬಂದು ನಟನೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.
ಇಂಚಗೇರಿ ಮಠದ ಸಪ್ತಾಹ ಹಿನ್ನೆಲೆ ಗುರುವಾರ ರಾತ್ರಿ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ನಾಗರಹಾವನ್ನು ಕೊರಳಲ್ಲಿ ಹಾಕಿಕೊಂಡು ಶಿವನ ಪಾತ್ರಧಾರಿ ಚರಂತಯ್ಯ ಕಾಜಿಬೀಳಗಿ ನಟನೆ ಮಾಡಿದ್ದಾರೆ. ಇದನ್ನೂ ಓದಿ: ಬಹುಮತ ಇಲ್ಲದಿದ್ದರೂ ಮೂರು ಪಕ್ಷದ ಬೆಂಬಲದಿಂದ ಸಭಾಪತಿಯಾಗಿದ್ದೆ: ಬಸವರಾಜ ಹೊರಟ್ಟಿ
ಚರಂತಯ್ಯ ಕಳೆದ 30 ವರ್ಷಗಳಿಂದ ಬಸವೇಶ್ವರ ನಾಟಕದಲ್ಲಿ ಶಿವನ ಪಾತ್ರವನ್ನು ಮಾಡುತ್ತಿದ್ದಾರೆ. ಪಾತ್ರ ನಿರ್ವಹಣೆ ವೇಳೆ ಮೈಮೇಲೆಲ್ಲಾ ಹಾವು ಓಡಾಡಿದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ.
ವೇದಿಕೆ ಮೇಲೆ ಹಾವು ಕಂಡು ಇತರ ಪಾತ್ರಧಾರಿಗಳು ಹಾಗೂ ಪ್ರೇಕ್ಷಕರು ಕೆಲ ಸಮಯ ದಂಗಾಗಿ ಹೋಗಿದ್ದರು. ಇದನ್ನೂ ಓದಿ: ಯಲಹಂಕ ವಾಯುನೆಲೆ ಸುತ್ತಮುತ್ತಲಿರುವ ಕಟ್ಟಡಗಳಿಗೆ BBMP ನೋಟಿಸ್