ದುಬೈ: ಏಷ್ಯಾಕಪ್‍ನ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೆಜ್ ಪಂದ್ಯ ನಿನ್ನೆ ನಡೆಯಿತು. ಈ ಪಂದ್ಯದಲ್ಲಿ ಭಾರತೀಯ ಆಟಗಾರ ಅರ್ಶ್‌ದೀಪ್ ಸಿಂಗ್ ಒತ್ತಡದ ಸಮಯದಲ್ಲಿ ಬಿಟ್ಟ ಕ್ಯಾಚ್ ಒಂದಕ್ಕೆ ಟೀಕೆಗಳು ಕೇಳಿ ಬರುತ್ತಿದೆ. ಟೀಕೆಗಳ ನಡುವೆ ಮಾಜಿ ಆಟಗಾರರು ಅರ್ಶ್‌ದೀಪ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ.
Advertisement
ಭಾರತ ನೀಡಿದ 182 ರನ್ ಚೇಸ್ ಮಾಡುತ್ತಿದ್ದಾಗ ಪಾಕಿಸ್ತಾನ 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗೆ ಸುಲಭವಾಗಿ ನೀಡಿದ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್ ಸಿಂಗ್ ಕೈಚೆಲ್ಲಿದರು. ಇದು ಪಾಕ್ ಗೆಲುವಿಗೆ ತಿರುವು ನೀಡಿತು. ಕೊನೆಯ ಓವರ್‌ನಲ್ಲಿ ಬೌಲಿಂಗ್‍ಗಿಳಿದ ಅರ್ಶ್‌ದೀಪ್ ಸಿಂಗ್ ಅವರ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ 2ನೇ ಎಸೆತದಲ್ಲಿ ಫುಲ್‍ಟಾಸ್ ಬೌಲ್ ಮಾಡಿ 4 ರನ್ ಚಚ್ಚಿಸಿಕೊಂಡರು. ಅದರ ಮರು ಎಸೆತದಲ್ಲೇ ಅಸಿಫ್ ಅಲಿ ಅವರ ವಿಕೆಟ್ ಉರುಳಿಸಿದರೂ ಜಯ ಪಾಕಿಸ್ತಾನದ ಪಾಲಾಯಿತು. ಅಂತಿಮವಾಗಿ ಪಾಕಿಸ್ತಾನ 5 ವಿಕೆಟ್‍ಗಳ ಜಯ ಸಾಧಿಸಿತು. ಇದನ್ನೂ ಓದಿ: ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್ ಬೆಂಬಲಿಸಿದ ಕಿಂಗ್ ಕೊಹ್ಲಿ
Advertisement
Advertisement
ಆ ಬಳಿಕ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್ ಸಿಂಗ್ ಕೈಚೆಲ್ಲಿದ ಬಗ್ಗೆ ತೀವ್ರ ಟೀಕೆಗಳು ಕೇಳಿ ಬರುತ್ತಿದೆ. ಆದರೆ ಮಾಜಿ ಆಟಗಾರರಾದ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರರು ಹರ್ಷದೀಪ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ. ಟೀಂ ಇಂಡಿಯಾದ ಸಹಆಟಗಾರರು ಅರ್ಶ್‌ದೀಪ್ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅರ್ಶ್‌ದೀಪ್ ಪೇಜ್ ಎಡಿಟ್ – ವಿಕಿಪೀಡಿಯಾಗೆ ಸಮನ್ಸ್ ಜಾರಿ ಮಾಡಿದ ಕೇಂದ್ರ
Advertisement
ಅರ್ಶ್‌ದೀಪ್ ಕುರಿತಾಗಿ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಭಾರತ ಹಾಗೂ ಪಾಕ್ ಪಂದ್ಯದ ಸಮಯದಲ್ಲಿ ನೀವು ನಿಮ್ಮ ಸೀಟಿನ ತುದಿಯಲ್ಲಿದ್ದರೆ, ಮೈದಾನದಲ್ಲಿ ಆಟಗಾರರ ಮೇಲಿನ ಒತ್ತಡವನ್ನು ಊಹಿಸಿ! ಒಂದು ಕೈಬಿಟ್ಟ ಕ್ಯಾಚ್ ಸಾಮರ್ಥ್ಯವನ್ನು ವ್ಯಾಖ್ಯಾನಿಸುವುದಿಲ್ಲ. ನಾವು ಕ್ರಿಕೆಟ್ ಪ್ರೀತಿಸುವ ರಾಷ್ಟ್ರದವರಾಗಿ ಒಂದಾಗಬೇಕು ಮತ್ತು ಯುವಕರನ್ನು ಟೀಕಿಸುವ ಬದಲು ಬೆಂಬಲಿಸಬೇಕು. ಹರ್ಷದೀಪ್ ಸಿಂಗ್ ನೀವು ಮತ್ತಷ್ಟು ಬಲಿಷ್ಠರಾಗಿ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಪಠಾಣ್ ಟ್ವೀಟ್ ಮಾಡಿ ಅರ್ಶ್‌ದೀಪ್ ಸಿಂಗ್ ದೃಢ ವ್ಯಕ್ತಿತ್ವದ ಯುವಕ ಅವರಿಗೆ ಬೆಂಬಲ ನೀಡಿ ಮುಂದಿನ ಭಾನುವಾರಕ್ಕೆ ಸಜ್ಜಾಗಿ ಎಂದಿದ್ದಾರೆ.
If you were at the edge of ur seat during #IndiaVSPak, imagine the pressure on the players in the park!
One dropped catch doesn’t define ability. We need to unite as a cricket loving nation & support youngsters instead of criticising them.
More power to you @arshdeepsinghh ????????
— Yuvraj Singh (@YUVSTRONG12) September 5, 2022
ಈಗಾಗಲೇ ಲೀಗ್‍ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ, ಸೂಪರ್ ಫೋರ್ ಹಂತದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದಿದೆ. ಏಷ್ಯಾಕಪ್‍ನಲ್ಲಿ ಅಂದುಕೊಂಡಂತೆ ನಡೆದರೆ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಟ್ಟರೆ ಸೆಪ್ಟೆಂಬರ್ 11 ಭಾನುವಾರದಂದು ಮತ್ತೆ ಕಾದಾಟ ನಡೆಸಲಿದೆ. ಹೌದು ಸೂಪರ್ ಫೋರ್ ಹಂತದಲ್ಲಿ 4 ತಂಡಗಳು ಪರಸ್ಪರ ಕಾದಾಟ ನಡೆಸುತ್ತಿವೆ. ಇದರಲ್ಲಿ ಹೆಚ್ಚು ಪಂದ್ಯ ಗೆದ್ದ ಎರಡು ತಂಡಗಳು ಫೈನಲ್‍ಗೆ ಲಗ್ಗೆ ಇಡಲಿದೆ. ಭಾರತ ಇನ್ನುಳಿದ ಎರಡು ಪಂದ್ಯ ಗೆದ್ದರೆ ಫೈನಲ್‍ಗೆ ಲಗ್ಗೆ ಇಡಲಿದೆ. ಇತ್ತ ಪಾಕಿಸ್ತಾನ ತಂಡದ ಫೈನಲ್ ಹಾದಿ ನಿನ್ನೆಯ ಗೆಲುವಿನ ಬಳಿಕ ಸುಗಮವಾಗಿದ್ದು, ಫೈನಲ್‍ನಲ್ಲಿ ಮತ್ತೊಮ್ಮೆ ಭಾರತವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ.
Live Tv
[brid partner=56869869 player=32851 video=960834 autoplay=true]