ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

Public TV
1 Min Read
GIRL 1

ಕೋಲ್ಕತ್ತಾ: ತರಬೇತಿ ವೇಳೆ 14 ವರ್ಷ ವಯಸ್ಸಿನ ಬಾಲಕಿಯ ಕುತ್ತಿಗೆಯ ಬಲಭಾಗದಲ್ಲಿ ಬಾಣವೊಂದು ಚುಚ್ಚಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿರೋ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದಿದೆ. ಬಾಲಕಿ ಫಝಿಲಾ ಖತುನ್‍ಗೆ ಬಾಣ ಚುಚ್ಚಿಕೊಂಡಿತ್ತು. ಸದ್ಯ ಶಸ್ತ್ರ ಚಿಕಿತ್ಸೆಯ ಮೂಲಕ ಬಾಲಕಿಯ ಕುತ್ತಿಗೆಯಲ್ಲಿ ಚುಚ್ಚಿಕೊಂಡಿದ್ದ ಬಾಣವನ್ನು ಹೊರತೆಗೆಯಲಾಗಿದೆ ಅಂತ ಬೊಲ್ಪುರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.GIRL 1 1

ಏನಿದು ಘಟನೆ?: ನಾವು ನಾಲ್ಕು ಮಂದಿ ತರಬೇತಿ ಪಡೆಯುತ್ತಿದ್ದೆವು. ಇಬ್ಬರು ಅಭ್ಯಾಸ ಮುಗಿಸಿದ್ದರು. ನಾನು ಮತ್ತು ಫಝಿಲಾ ಅಭ್ಯಾಸ ಮಾಡುತ್ತಿದ್ದೆವು. ನಾನು ಬಾಣ ಬಿಟ್ಟ ವೇಳೆ ಫಝಿಲಾ ಅಚಾನಕ್ ಆಗಿ ಎದುರು ಬಂದಳು. ಪರಿಣಾಮ ಚೂಪಾದ ಬಾಣ ಆಕೆಯ ಕುತ್ತಿಗೆ ಹೊಕ್ಕಿತು ಅಂತ ಜ್ಯುವೆಲ್ ಶೇಕ್ ಮಾಧ್ಯಮಕ್ಕೆ ತಿಳಿಸಿದ್ದಾಳೆ.

ಶಸ್ತ್ರ ಚಿಕಿತ್ಸೆ ಬಳಿಕ ಬಾಲಕಿ ಫಝಿಲಾ ಮಾತನಾಡಿದ್ದು, ಜ್ಯುವೆಲ್ ಅಭ್ಯಾಸ ಮಾಡುತ್ತಿದ್ದುದನ್ನು ನಾನು ಗಮನಿಸಲಿಲ್ಲ. ನಾನು ತುಂಬಾ ಹತ್ತಿರ ಹೋದ ಕಾರಣ ಬಾಣ ಚುಚ್ಚಿಕೊಳ್ತು. ಈ ವೇಳೆ ಸ್ಥಳದಲ್ಲಿ ಯಾವ ತರಬೇತುದಾರರೂ ಇರಲಿಲ್ಲ ಅಂತ ಹೇಳಿದ್ದಾಳೆ.

ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

GIRL 2 1

GIRL 3 1

GIRL 4

GIRL 5

GIRL 6

Share This Article