AR Wedding: ಕುಟುಂಬದ ಜೊತೆ ನಿಲ್ಲದೆ ಮಗಳೊಂದಿಗೆ ಪೋಸ್ ಕೊಟ್ಟ ಐಶ್ವರ್ಯಾ ರೈ

Public TV
1 Min Read
FotoJet 1 19

ರಾವಳಿ ಬ್ಯೂಟಿ ಐಶ್ವರ್ಯಾ ರೈ (Aishwary Rai) ದಾಂಪತ್ಯ ಬಗ್ಗೆ ಮತ್ತೆ ಗುಸು ಗುಸು ಶುರುವಾಗಿದೆ. ಬಚ್ಚನ್ ಪರಿವಾರದ ಜೊತೆ ಐಶ್ವರ್ಯಾ ಸಂಬಂಧ ಸರಿಯಿಲ್ಲ ಎಂದು ಮತ್ತೆ ಚರ್ಚೆಯಾಗುತ್ತಿದೆ. ಅಂಬಾನಿ ಮನೆ ಮಗನ ಮದುವೆಯಲ್ಲಿ ಫ್ಯಾಮಿಲಿ ಜೊತೆ ಅಭಿಷೇಕ್‌ ಬಚ್ಚನ್‌ ಹಾಜರಿ ಹಾಕಿದ್ದರು. ಕುಟುಂಬದ ಜೊತೆ ಕಾಣಿಸಿಕೊಳ್ಳದೇ ಪ್ರತ್ಯೇಕವಾಗಿ ಮಗಳೊಂದಿಗೆ ಕ್ಯಾಮೆರಾಗೆ ನಟಿ ಪೋಸ್ ಕೊಟ್ಟಿದ್ದಾರೆ. ಇದು ನೆಟ್ಟಿಗರ ಡಿವೋರ್ಸ್ ಅನುಮಾನಕ್ಕೆ ತುಪ್ಪ ಸುರಿದಂತೆ ಆಗಿದೆ.

FotoJet 32ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನದಲ್ಲಿ ಬಿರುಕಾಗಿದೆ ಎಂದು ಕೆಲ ತಿಂಗಳುಗಳಿಂದ ಹರಿದಾಡುತ್ತಿದೆ. ಇದೀಗ ನಡೆದಿರುವ ಘಟನೆ ಡಿವೋರ್ಸ್ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ:ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

ಅಂಬಾನಿ ಮಗನ ಮದುವೆಯಲ್ಲಿ ಅಮಿತಾಭ್, ಜಯಾ ಬಚ್ಚನ್, ಮಗಳು ಶ್ವೇತಾ ಮತ್ತು ಅವರ ಮಕ್ಕಳ ಜೊತೆ ಅಭಿಷೇಕ್ ಬಚ್ಚನ್ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆದರೆ ನಟಿ ಐಶ್ವರ್ಯಾ ರೈ ಕುಟುಂಬದ ಜೊತೆ ಕಾಣಿಸಿಕೊಳ್ಳದೇ ಪ್ರತ್ಯೇಕವಾಗಿ ಮಗಳು ಆರಾಧ್ಯ ಜೊತೆ ಕ್ಯಾಮೆರಾ ಪೋಸ್ ನೀಡಿದ್ದಾರೆ.

ಈ ಫೋಟೋಗೆ ನೆಗೆಟಿವ್ ಕಾಮೆಂಟ್‌ಗಳು ಹರಿದು ಬರುತ್ತಿದೆ. ಸದ್ಯ ಹರಿದಾಡುತ್ತಿರುವ ಈ ಸುದ್ದಿಗೆ ಐಶ್ವರ್ಯಾ ದಂಪತಿ ಸ್ಪಷ್ಟನೆ ಕೊಡುತ್ತಾರಾ? ಕಾಯಬೇಕಿದೆ.

Share This Article