ತಿರುವನಂತಪುರಂ: ಎಲ್ ನಿನೋ ಎಫೆಕ್ಟ್ ಕಾರಣ ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶ ನಾಲ್ಕು ದಿನ ವಿಳಂಬವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಜೂನ್ ಮೊದಲ ವಾರದಲ್ಲಿ ಕೇರಳ, ಕರ್ನಾಟಕವನ್ನು ಮುಂಗಾರು ಮಾರುತಗಳು ಪ್ರವೇಶ ಮಾಡಬಹುದು ಎಂದಿದೆ. ಈ ಮೊದಲು ಮೇ 27ಕ್ಕೆ ಮುಂಗಾರು ಮಾರುಗಳು ಕೇರಳ ಪ್ರವೇಶಿಸಬಹುದು ಎಂದು ಐಎಂಡಿ ತಿಳಿಸಿತ್ತು. ಈಗಾಗಲೇ ಅಂಡಮಾನ್ ದ್ವೀಪಗಳನ್ನು ತಲುಪಿರುವ ಮುಂಗಾರು ಮಾರುತಗಳು ಈಗ ಅರಬ್ಬಿ ಸಮುದ್ರದ ಕಡೆ ಚಲಿಸ್ತಿವೆ. ಮುಂಜಾಗ್ರತಾ ಕ್ರಮವಾಗಿ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಮೇ 29ರವರೆಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಶಂಕು: ವಿಶೇಷ ಏನು?
Advertisement
Weekly Weather Video (English) Dated 26.05.2022https://t.co/HRBn7bY2TEhttps://t.co/VBYedenna0
— India Meteorological Department (@Indiametdept) May 26, 2022
Advertisement
ದೇಶದ ರೈತರಿಗೆ ಖುಷಿ ಸುದ್ದಿ ಹೊರಬಿದ್ದಿದ್ದು, ಈ ವರ್ಷ ದೇಶದಲ್ಲಿ ಉತ್ತಮ ಮಳೆ ಅಂದ್ರೆ ವಾಡಿಕೆಯಲ್ಲಿ ಶೇಕಡಾ 99ರಷ್ಟು ಆಗಲಿದೆ. ಗುಜರಾತ್, ಪಂಜಾಬ್ ಸೇರಿ ಆ ಭಾಗದ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚಿ ಮಳೆ ಆಗಲಿದೆ ಎಂದು ಐಎಂಡಿ ಅಂದಾಜಿಸಿದೆ. ಇತ್ತ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂತು. ಕೇರಳ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಳೆಯ ಸಿಂಚನವಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿದ ನಟಿ ಶ್ರದ್ಧಾ ಕಪೂರ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್
Advertisement
ಏನಿದು ಎಲ್ ನಿನೋ?
ಎಲ್ ನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ಪೆರು ಮತ್ತು ಈಕ್ವೆಡಾರ್ ಬಳಿ ಪ್ರಾರಂಭವಾಗುವ ಒಂದು ಹವಾಮಾನ ವೈಪರಿತ್ಯದ ವಿದ್ಯಮಾನವಾಗಿದೆ. ಇದರ ಪ್ರಾರಂಭದ ಸೂಚನೆಯಾಗಿ ಈ ಭಾಗದ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನದ ಸರಾಸರಿಗಿಂತ ಹೆಚ್ಚಾಗಲು ಆರಂಭವಾಗುತ್ತದೆ. ಪೆಸಿಫಿಕ್ ಸಾಗರದ ಮೇಲ್ಮೈ ತಾಪ ಸರಾಸರಿ ಸಹಜ ತಾಪಕ್ಕಿಂತ 0.5-0.9 ಡಿಗ್ರಿ ಸೆಲ್ಸಿಯಸ್ ಇದ್ದರೆ ಅದನ್ನು ದುರ್ಬಲ ಎಲ್ ನಿನೋ ಎಂದು ಕರೆಯಲಾಗುತ್ತದೆ. ಎಲ್‍ನಿನೋ 1.5 ಡಿಗ್ರಿಗಿಂತ ಹೆಚ್ಚಿರಬೇಕು ಆಗ ಉತ್ತಮ ಮಳೆ ಆಗುತ್ತದೆ.
ಒಂದು ವೇಳೆ ಪೆಸಿಫಿಕ್ ಮೇಲ್ಮೈ ನೀರು ಬೆಚ್ಚಗಿದ್ದರೆ ಅದು ಶುಷ್ಕ ಹವಾಮಾನಕ್ಕೆ ಕಾರಣವಾಗುತ್ತದೆ. ಇದರಿಂದ ಮಳೆ ಕಡಿಮೆಗೊಳ್ಳುತ್ತದೆ. ಭಾರತದ ಬಹುತೇಕ ಭಾಗದಲ್ಲಿ ಸರಾಸರಿ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ ಅಥವಾ 1 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇತ್ತ ಹಿಂದೂ ಮಹಾಸಾಗರದ ದ್ವಿಧ್ರುವಿ (ಐಓಡಿ)ಎಂದು ಕರೆಯಲ್ಪಡುವ ಮತ್ತೊಂದು ವಿದ್ಯಮಾನವು ತಟಸ್ಥವಾಗಿದೆ. ಈ ವಿದ್ಯಮಾನವು ಹಿಂದೂ ಮಹಾಸಾಗರದ ವಿವಿಧ ಭಾಗಗಳ ನಡುವಿನ ತಾಪಮಾನದಲ್ಲಿನ ವ್ಯತ್ಯಾಸವನ್ನು ತಿಳಿಸುತ್ತದೆ.