ಚೆನ್ನೈ: ತಮ್ಮ ಸರ್ಕಾರಕ್ಕೆ ಎಂಟು ವರ್ಷ ತುಂಬಿದ ದಿನವೇ ಪ್ರಧಾನಿ ಮೋದಿ ದಕ್ಷಿಣ ದಂಡಯಾತ್ರೆ ನಡೆಸಿದ್ದಾರೆ. ಚೆನ್ನೈನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸೇರಿ 31ಸಾವಿರ ಕೋಟಿ ಮೊತ್ತದ 11 ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
…in the presence of Governor of Tamil Nadu Shri R N Ravi ji, CM of Tamil Nadu Shri @mkstalin ji, CM of Karnataka Shri @BSBommai ji, CM of Andhra Pradesh Shri @ysjagan ji,… pic.twitter.com/kFYd3FCABm
— Nitin Gadkari (@nitin_gadkari) May 26, 2022
Advertisement
ಎಕ್ಸ್‌ಪ್ರೆಸ್‌ವೇ ವಿಶೇಷ ಏನು?
ಭಾರತ್‍ಮಾಲಾ ಯೋಜನೆಯ ಅಡಿ 14,870 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣವಾಗಲಿದೆ. ಸದ್ಯ 340 ಕಿ.ಮೀ ಉದ್ದ ಇರುವ ರಸ್ತೆ 262 ಕಿಲೋಮೀಟರ್‌ಗೆ ಇಳಿಕೆಯಾಗಲಿದೆ. ಮೂರು ರಾಜ್ಯಗಳ ಮೂಲಕ ಈ ರಸ್ತೆ ಹಾದು ಹೋಗಲಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಅಲೆ ಶುರುವಾಗಿದೆ : ಮೋದಿ
Advertisement
ಕರ್ನಾಟಕದಲ್ಲಿ 71 ಕಿ.ಮೀ, ಆಂಧ್ರದಲ್ಲಿ 85 ಕಿ.ಮೀ, ತಮಿಳುನಾಡಲ್ಲಿ 106 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ಪ್ರಯಾಣದ ಅವಧಿ ಎರಡೂವರೆ ಗಂಟೆಗೆ ಇಳಿಕೆಯಾಗಲಿದ್ದು 2024ರ ಮಾರ್ಚ್‍ನಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಹಾಕಲಾಗಿದೆ.