ಆತ್ಮಹತ್ಯಾ ದಾಳಿಗೆ ಪಾಕ್ ಸೇನೆ 30 ಸಾವಿರ ನೀಡಿದೆ: ಸತ್ಯ ಬಾಯ್ಬಿಟ್ಟ ಬಂಧಿತ ಟೆರರಿಸ್ಟ್

Public TV
1 Min Read
Tabarak Hussain

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಗುಂಡು ತಗುಲಿ ಭಾನುವಾರ ಬಂಧಿತನಾಗಿದ್ದ ಲಷ್ಕರ್-ಎ-ತೋಯ್ಬಾ(ಎಲ್‌ಇಟಿ) ಭಯೋತ್ಪಾದಕ ಬುಧವಾರ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ.

ಪಾಕಿಸ್ತಾನಿ ಸೇನೆಯು ಬಂಧಿತ ಭಯೋತ್ಪಾದಕನಿಗೆ ಆತ್ಮಾಹುತಿ ಕಾರ್ಯಾಚರಣೆ ನಡೆಸಲು 30,000 ರೂ. ನೀಡಿದ್ದು, ತನ್ನೊಂದಿಗೆ ಇತರ 4-5 ಭಯೋತ್ಪಾದಕರನ್ನೂ ಕಳುಹಿಸಿದೆ ಎಂದು ತಿಳಿಸಿದ್ದಾನೆ.

ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ತಬಾರಕ್ ಹುಸೇನ್, ನಾನು ಮತ್ತು ಇತರ 4-5 ಜನರು ಆತ್ಮಹತ್ಯಾ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೇವೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದಾರೆ. ಭಾರತೀಯ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಅವರು ನನಗೆ 30,000 ರೂ. ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಮಹಿಳೆ ಲೈಂಗಿಕ ಪ್ರಚೋದನೆ ಬಟ್ಟೆ ತೊಟ್ಟಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನ್ಯಾಯಾಧೀಶ ವರ್ಗಾವಣೆ

Tabarak Hussain 1

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಕೋಟ್ಲಿಯ ಸಬ್ಜ್ಕೋಟ್ ಗ್ರಾಮದ ನಿವಾಸಿ ಹುಸೇನ್(32) ಕಳೆದ 6 ವರ್ಷಗಳಲ್ಲಿ 2ನೇ ಬಾರಿ ಗಡಿಯಿಂದ ಈಚೆ ನುಸುಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತ ಬಂಧಿಸಲ್ಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಾಲಿಗೆ ಕಟ್ ಮಾಡ್ತೀವಿ ಹುಷಾರ್ ಮಗನೇ ಬಾಲ ಬಿಚ್ಬೇಡ- ಈಶ್ವರಪ್ಪಗೆ ಬೆದರಿಕೆ ಪತ್ರ

ಈ ಹಿಂದೆ, ತಬಾರಕ್ ಮತ್ತು ಆತನ ಕಿರಿಯ ಸಹೋದರ ಹರೋನ್ ಅಲಿ ಅಮೃತಸರದ ಅಟ್ಟಾರಿ ವಾಘಾ ಗಡಿಯ ಮೂಲಕ ವಾಪಸಾಗುತ್ತಿರುವಾಗ ಬಂಧಿಸಲ್ಪಟ್ಟಿದ್ದರು. ಆಗ 26 ತಿಂಗಳ ಸೆರೆವಾಸವನ್ನು ಅನುಭವಿಸಿದ್ದರು ಎಂದು ವರದಿಯಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *